‘ಕಾಂಗ್ರೆಸ್ ಮೋದಿ ಜತೆಗಿದೆ’ ಎಂದು ಶಶಿ ತರೂರ್ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಮೋದಿ ಪರವಾದ ಹೇಳಿಕೆಗಳಿಂದ ಸುದ್ದಿಯಾಗಿರೋ ಕಾಂಗ್ರೆಸ್ ಸಂಸದ ಶಶಿ ತರೂರ್, ‘ನಾವು ಮೋದಿ ಜತೆ ಇದ್ದೇವೆ’ ಎಂದು ಹೇಳುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಹೌದು, ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪವಾಗಲಿದ್ದು, ಈ ವೇಳೆ ವಿರೋಧ ಪಕ್ಷಗಳು ಸೇರಿದಂತೆ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಬೆನ್ನಿಗೆ ನಿಲ್ಲಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಶಶಿ ತರೂರ್, ಕಾಶ್ಮೀರ ಭಾರತದ ಆಂತರಿಕ ವಿಚಾರ. ಇದರಲ್ಲಿ ತಲೆ ಹಾಕಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ. ಕಾಶ್ಮೀರ ವಿಚಾರವಾಗಿ ನಾವು ಕೇಂದ್ರ ಸರ್ಕಾರದ ವಿರುದ್ಧ ಏನೇ ಟೀಕೆ ಮಾಡಿರಬಹುದು ಆದರೆ, ದೇಶದ ಹೊರಗೆ ನಾವೆಲ್ಲರೂ ಒಂದೇ. ನಮ್ಮ ದೇಶದ ಒಂದೇ ಒಂದು ಇಂಚನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ’ ಎಂದು ಸಂದೇಶ ರವಾನಿಸಿದ್ದಾರೆ.

Leave a Reply