ಬೆಂಕಿ ಹಚ್ಚೊದೇ ಕಟೀಲ್ ಕೆಲ್ಸ: ಸಿದ್ದರಾಮಯ್ಯ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

‘ನಳಿನ್ ಕುಮಾರ್ ಕಟೀಲ್ ಅವರು ಬೇರೆ ಪಕ್ಷದ ನಾಯಕರ ಮಧ್ಯೆ ಬೆಂಕಿ ಹಚ್ಚೊದೇ ಕೆಲ್ಸ…’ ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿ ಕಾರಿದ ಪರಿ.

ಮಾಜಿ ಸಚಿವ ಡಿ.ಕೆ  ಶಿವಕುಮಾರ್‌ ಅವರನ್ನು ಬಂಧಿಸಲು ಸಿದ್ದರಾಮಯ್ಯನವರೇ ಕಾರಣ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಕ್ಕೆ ಸಿದ್ದರಾಮಯ್ಯನವರು ಸೋಮವಾರ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಟ ಜ್ಞಾನವೂ ಇಲ್ಲ. ಇದು ದುರುದ್ದೇಶದಿಂದ ಹೇಳಿರುವ ಮಾತು. ಐಟಿ, ಇಡಿ ಯಾರ ಅಧೀನದಲ್ಲಿದೆ ಅನ್ನೋದು ಗೊತ್ತಿದಿಯಾ ಅವರಿಗೆ? ಅವೆಲ್ಲವೂ ಕೇಂದ್ರ ಸರ್ಕಾರದ ಅಧೀನದಲ್ಲಿದೆ.

ಹುಳಿ ಹಿಂಡುವುದು, ಬೆಂಕಿ ಹಚ್ಚೋದು ನಳಿನ್ ಅವರ ಕೆಲಸ.‌ ಬಿಜೆಪಿಯವರು ಅವರನ್ನ ಯಾಕೆ ಅಧ್ಯಕ್ಷರನ್ನಾಗಿ ಮಾಡಿದ್ರೋ ಗೊತ್ತಿಲ್ಲ. ಕನಿಷ್ಠ ಜ್ಙಾನ ಇಲ್ಲದವರನ್ನ ಯಾಕೆ ಮಾಡಿದರೋ ಗೊತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply