ಗಡಿಯಲ್ಲಿ ಮತ್ತೆ ಉಗ್ರರಿಗೆ ಪಾಕ್ ಪೋಷಣೆ! ಬಯಲಾಯ್ತು ಪಾಕಿಗಳ ಕುತಂತ್ರ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಭಾರತದ ವಿರುದ್ಧದ ಭಯೋತ್ಪಾದನ ಯುದ್ಧಕ್ಕೆ ಮತ್ತೆ ತಯಾರಿ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ 7 ಲಾಂಚ್ ಪ್ಯಾಡ್ ಗಳನ್ನು ಮತ್ತೆ ಆರಂಭಿಸಿದ್ದು, 275 ಉಗ್ರರನ್ನು ಭಾರತದ ಗಡಿಯೋಳಗೆ ಒಳನುಸುಳಿಸಲು ಪ್ರಯತ್ನಿಸುತ್ತಿದೆ ಎಂಬ ವರದಿ ಬಂದಿದೆ.

ಮುಂದಿನ ತಿಂಗಳು ಜಾಗತಿಕ ಭಯೋತ್ಪಾದನ ಆರ್ಥಿಕ ಸಹಾಯದ ಕುರಿತ ಪರಿಶೀಲನಾ ಸಂಸ್ಥೆ ಫೈನಾನ್ಷಿಯಲ್ ಟಾಸ್ಕ್ ಫೋರ್ಸ್ ಸಭೆ ನಡೆಸಲಿದ್ದು, ಪಾಕಿಸ್ತಾನದ ಭವಿಷ್ಯವನ್ನು ನಿರ್ಧರಿಸಲಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ. ಈ ಬಾರಿ ಪಾಕಿಸ್ತಾನ ಅಫ್ಘನ್ ಮತ್ತು ಪಶ್ತುನ್ ಜಿಹಾದಿಗಳನ್ನು ಭಾರತದ ವಿರುದ್ಧ ಛೂ ಬಿಡುತ್ತಿದ್ದು, ಇದೊಂದು ವಿರಳ ಪ್ರಯತ್ನ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

1990ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಕಾಶ್ಮೀರದಲ್ಲಿ ಪಾಕಿಸ್ತಾನ ವಿದೇಶಿ ಭಯೋತ್ಪಾದಕರನ್ನು ಗಡಿಯೊಳಗೆ ನುಸುಳಿಸುವ ಪ್ರಯತ್ನಕ್ಕೆ ಮುಂದಾಗಿತ್ತು. ಗುಪ್ತಚರ ಇಲಾಖೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಸೇನೆ ಹಾಗೂ ಪಾಕ್ ಗುಪ್ತಚರ ಇಲಾಖೆ ಐಎಸ್ಐ ಗಡಿಯಲ್ಲಿರು ಲಾಂಚ್ ಪ್ಯಾಡ್ ಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಹೆಚ್ಚು ಪ್ರಮಾಣದಲ್ಲಿ ಭಯೋತ್ಪಾದಕರು ಗಡಿ ನುಸುಳುವಂತೆ ಸಹಕರಿಸುತ್ತಿದ್ದಾರೆಗುರೇಜ್ ಬಳಿಯ ಗಡಿಯಲ್ಲಿ 80, ಮಚಲ್ 60, ಕರ್ನಾಹ್ 50, ಕೆರನ್ 40, ಉರಿ ಬಳಿ 20, ನೌಗಮ್ ಗಡಿಯಲ್ಲಿ 15 ಹಾಗೂ ರಾಂಪುರ ಗಡಿ ಬಳಿ 10 ಉಗ್ರರಿಗ ತರಬೇತಿ ನೀಡಲಾಗುತ್ತಿದೆ.

Leave a Reply