ಧೀ ಗ್ಲೋಬಲ್ ಸ್ಕೂಲ್ ನಿಂದ ಶಾಲಾ ಮಕ್ಕಳಿಗಾಗಿ ರಾಸಾಯನಿಕ ಪ್ರಯೋಗ ಸ್ಪರ್ಧೆ

ಬೆಂಗಳೂರು: ಧೀ ಗ್ಲೋಬಲ್ ಸ್ಕೂಲ್ ಅಂತಾರಾಷ್ಟ್ರೀಯ ವಾರ್ಷಿಕ ಆವರ್ತ ಕೋಷ್ಟಕ ರಾಸಾಯನಿಕ ಪ್ರಾಯೋಗಿಕ ಸ್ಪರ್ಧೆಯನ್ನು ದಿನಾಂಕ 7 ಸೆಪ್ಪೆಂಬರ್ 2019 ರಂದು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಕಿರಿಯ ವಿಭಾಗದಲ್ಲಿ ಧೀ ಗ್ಲೋಬಲ್ ಸ್ಕೂಲ್‍ನ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹಿರಿಯ ವಿಭಾಗದಲ್ಲಿ ಎನ್. ಪಿ. ಎಸ್ ಶಾಲೆಯ ಮಕ್ಕಳು ಪ್ರಥಮ ಸ್ಥಾನವನ್ನು ಪಡೆದುಕೊಂಡರು.

ಈ ಸ್ಪರ್ಧೆಯಲ್ಲಿ ಜಾದು ಕಾಗದ, ಲಾವದೀಪ, ದಂತ ಮಂಜನ ದಲ್ಲಿರುವ ಕಬ್ಬಿಣ ಅಂಶವನ್ನು ಪರೀಕ್ಷಿಸುವುದು, ಸ್ತಂಭ ವರ್ಣರೇಖನ ಮತ್ತು ಸುಡುವುದನ್ನು ನಿಂದಿಸುವುದು, ಪಿಷ್ಟ ಪರೀಕ್ಷೆ ಹೀಗೆ ಅನೇಕ ಪ್ರಯೋಗಗಳ ಒಳಗೊಂಡಿದ್ದವು. ಎನ್. ಪಿ. ಎಸ್ ಹಾಗೂ  ಕೆ. ಪಿ. ಎಸ್ ಶಾಲೆಯ ಮಕ್ಕಳು ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಎ.ಬಿ ಪಾಟೀಲ್( ವಿಜ್ಞಾನಿ ಮತ್ತು ಸಿ .ಇ .ಓ. ಥಿಂಕ್ ಅಂಡ್ ಇಂಕ್ ಫೌಂಡೇಶನ್) ಮತ್ತು ಶ್ರೀಯುತ  ಹೆಚ್.ಎ ಜಯಸಿಂಹ (ಸಂಪಾದಕರು ಎನ್. ಐ. ಇ ) ಪ್ರಾಂಶುಪಾಲರು ಸ್ವಾತಿ ಆಚಾರ್ ಅವರು ಆಗಮಿಸಿದ್ದರು.

ಈ ಕಾರ್ಯಕ್ರಮದ ವೇಳೆ ಬಿ.ಎ. ಪಾಟೀಲ್ ರವರು ಅನೇಕ ಸೃಜಾನಾತ್ಮಕ ಕಲ್ಪನೆಗಳನ್ನು ಮಕ್ಕಳಿಗೆ ಸವಿವರವಾಗಿ ತಿಳಿಸಿದರು. ಹಾಗೆಯೇ ಅವರು ವಿಜ್ಞಾನ ಪ್ರಯೋಗಾಲಯದಲ್ಲಿ ಅನೇಕ ಪ್ರಯೋಗಗಳನ್ನು ತೋರಿಸಿದರು ಮತ್ತು  ಸ್ವಾಗತ ಕೊಠಡಿ ಯಲ್ಲಿ ಚಿತ್ರ ಪ್ರಸ್ತುತ ಪಡಿಸುವಿಕೆಯ ಮೂಲಕ ಪ್ರಯೋಗಗಳನ್ನು ವಿವರಿಸಿದರು. ಇದೇ ವೇಳೆ ಪ್ರೇಕ್ಷಕರನ್ನು ಕುರಿತು ಕೆಲವು ವಿಚಾರಗಳನ್ನು ಬಗ್ಗೆ ಚರ್ಚಿಸಿದರು. ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು  ಪ್ರೋತ್ಸಾಹಿಸಿದ್ದಲ್ಲದೆ ಮಕ್ಕಳಿಗೆ ವೈಜ್ಞಾನಿಕ ಚಿಂತನೆಗಳನೆಗಳನ್ನು ಕ್ರಿಯಾತ್ಮಕವಾಗಿ ಅಳವಡಿಕಕೊಂಡು ಮುಂದಿನ ವಿಜ್ಞಾನಿಗಳಾಗಿ ಎಂದು ಆಶೀರ್ವದಿಸಿದರು.

ಹೆಚ್.ಎ ಜಯಸಿಂಹರವರು ಮಕ್ಕಳಿಗೆ ಉಪಯುಕ್ತವಾದ ಹೇಳಿಕೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಿದರು. ಹಾಗೆಯೇ ಥಿಂಕ್ ಅಂಡ್ ಗ್ರೋ ಬಗ್ಗೆ ಸವಿವರವಾಗಿ ತಿಳಿಸಿದರು. ಈ ರೀತಿಯಾಗಿ ಇಡೀ ಕಾರ್ಯಕ್ರಮವು ವಿವಿಧ ಶಾಲೆ ಮಕ್ಕಳಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಒಳ್ಳೆಯ ವೇದಿಕೆಯನ್ನು ಕಲ್ಪಿಸಿತು.

Leave a Reply