184 ಜನರಿಗೆ ಇಡಿ ನೋಟೀಸ್? ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಒಬ್ಬರಲ್ಲ ಇಬ್ಬರಲ್ಲ ಒಟ್ಟು 184 ಮಂದಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಹೌದು, ಈ ವಿಚಾರವಾಗಿ ಇಡಿಯಿಂದ ನೋಟೀಸ್ ಪಡೆದಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಮಾಹಿತಿ ನೀಡಿದ್ದು, ಅವರು ಹೇಳಿರೋದಿಷ್ಟು…

‘ಇಡಿ ಅದಿಕಾರಿಗಳು 184 ಜನರಿಗೆ ನೋಟೀಸ್ ನೀಡಿದೆ. ಅವರಲ್ಲಿ ನಾನು ಒಬ್ಬಳು ಅಷ್ಟೇ. ಐಟಿ ದಾಳಿ ಮಾಡುವಷ್ಟು ದೊಡ್ಡ ವ್ಯವಹಾರಗಳನ್ನು ನಾನು ಮಾಡಿಲ್ಲ. ಹೀಗಾಗಿ ಕುಟುಂಬ, ಸಹೋದರನ ವ್ಯವಹಾರದ ಬಗ್ಗೆ ಕೇಳಬಹುದು. ಸೆಪ್ಟೆಂಬರ್ 14ಕ್ಕೆ ಇಡಿ ನೋಟಿಸ್ ಬಂದಿತ್ತು. ಟೈಂ ಕೇಳಿದ್ದು ನಿಜ. ಇಡಿ ಅವರು ವಿಚಾರಣೆಗೆ ಕರೆದಿದ್ದಾರೆ. ಬೆಂಗಳೂರು, ಬೆಳಗಾವಿಯಲ್ಲೇ ವಿಚಾರಣೆಗೆ ಮನವಿ ಮಾಡಿದ್ದೇನೆ. ನನಗೆ ಈ ಬಗ್ಗೆ ಭಯ ಇಲ್ಲ. 2 ಸಲ ಐಟಿ ದಾಳಿಯಾದಾಗ ಏನೂ ಸಿಕ್ಕಿಲ್ಲ. ಡಿಕೆಶಿ ಜೊತೆ ವ್ಯವಹಾರದ ಬಗ್ಗೆ ದಾಖಲೆ ಇರೋದು ಗೊತ್ತಿಲ್ಲ. ಡಿಕೆ ಶಿವಕುಮಾರ್ ಅವರು ನನ್ನ ರಾಜಕೀಯ ಗುರು.”

Leave a Reply