ಪೈರಸಿಗೆ ಪಟ್ಟು ಹಾಕಿ ಒಂದೇ ವಾರದಲ್ಲಿ 100 ಕೋಟಿ ಸಂಪಾದಿಸಿದ ಪೈಲ್ವಾನ್!?

ಡಿಜಿಟಲ್ ಕನ್ನಡ ಟೀಮ್:

ಪೈರಸಿ ಪಿತೂರಿ ನಡುವೆಯೂ ಸ್ಯಾಂಡಲ್ ವುಡ್ ನ ‘ಪೈಲ್ವಾನ’ ಮೊದಲ ವಾರವೇ 100 ಕೋಟಿ ಬಾಕ್ಸ್ ಆಫೀಸ್ ಸಂಪಾದನೆ ಮಾಡಿದ್ದಾನೆ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಒಂದು ಟ್ರೆಂಡ್ ಆಗಿದ್ದು, ಪರಿಣಾಮ 100 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಸಾಮಾನ್ಯವಾಗಿದೆ. ಕೆಜಿಎಫ್, ಕುರುಕ್ಷೇತ್ರದ ನಂತರ ಈಗ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ 100 ಕೋಟಿ ಕ್ಲಬ್ ಸೇರಿರೋದು ಕಿಚ್ಚನ ಅಭಿಮಾನಿಗಳಿಗೆ ಮಾತ್ರವಲ್ಲ ಚಂದನವನ ಪ್ರಿಯರಿಗೂ ಹೆಮ್ಮೆ ತಂದಿದೆ.

ಕನ್ನಡ ಸಿನೆಮಾ ಒಂದೇ ವಾರದಲ್ಲಿ 100 ಕೋಟಿ ಸಾಧ್ಯನಾ ಅಂತಾ ಪ್ರಶ್ನೆ ಹುಟ್ಟೋದು ಸಹಜ ಆದರೆ ಇಲ್ಲಿ ಗಮನಿಸಬೇಕಾದ ಅಂಶ ಈ ಸಿನೆಮಾ ಐದು ಭಾಷೆಗಳಲ್ಲಿ 4000 ಕ್ಕೂ ಹೆಚ್ಚು ಪರದೆ ಮೇಲೆ ಪೈಲ್ವಾನ್ ಪ್ರದರ್ಶನ ಕಂಡಿದೆ. ಇನ್ನು ಸುದೀಪ್ ಅವರ ಬಾಲಿವುಡ್ ಸಂಬಂಧ ಹೆಚ್ಚು ಹಿಂದಿ ಚಿತ್ರಮಂದಿರ ಪಡೆಯಲು ಅನುಕೂಲವಾಗಿದೆ. ಹಿಂದಿ ಸಿನಿ ಪ್ರಿಯರಿಗೆ ಸೌತ್ ಸಿನಿಮಾ ರುಚಿ ಇಷ್ಟವಾಗಿದ್ದು, ಸುನೀಲ್ ಶೆಟ್ಟಿ ಹಾಗೂ ಉತ್ತರ ಭಾರತದ ಮುಖಗಳು ಚಿತ್ರದಲ್ಲಿ ಕಾಣಿಸಿಕೊಂಡಿರೋದು ಚಿತ್ರಕ್ಕೆ ಪುಷ್ಟಿ ನೀಡಿದೆ.

ಅಂದಹಾಗೆ ಚಿತ್ರ ಬಿಡುಗಡೆಯಾದ ಮರುದಿನವೇ ಚಿತ್ರದ ಸಂಪೂರ್ಣ ಪೈರಸಿ ಪ್ರತಿ ಲೀಕ್ ಆಗಿತ್ತು. ಇದರ ಹೊರತಾಗಿಯೂ ಪೈಲ್ವಾನನ ಅಬ್ಬರ ಜೋರಾಗಿದೆ. ಇನ್ನು ಚಿತ್ರದ ನಿತ್ಯದ ಗಳಿಕೆ ನೋಡುವುದಾದರೆ ಮೊದಲ ದಿನ 17 ಕೋಟಿ ರೂ, ಎರಡನೇ ದಿನ 15 ಕೋಟಿ ರೂ, ಮೂರನೇ ದಿನ 14 ಕೋಟಿ ರೂ, 4ನೇ ದಿನ 18 ಕೋಟಿ ರೂ, 5ನೇ ದಿನ 11.1 ಕೋಟಿ ರೂ, 6ನೇ ದಿನ 9.4 ಕೋಟಿ ‘ಪೈಲ್ವಾನ್’ ಕಮಾಯಿ ಮಾಡಿದೆ. ಅಲ್ಲದೆ 7ನೇ ದಿನ 8.2 ಕೋಟಿ ರೂ. ಗಳಿಸುವ ಮೂಲಕ ಪೈಲ್ವಾನ್ 100 ಕೋಟಿ ಕ್ಲಬ್​ಗೆ ಎಂಟ್ರಿಯಾಗಿದೆ ಎಂದು ಒರಾಕಲ್​ಗ್ಲೋಬ್.ಕಾಮ್ ತಿಳಿಸಿದೆ.

Leave a Reply