ಸ್ವದೇಶಿ ನಿರ್ಮಿತ ತೇಜಸ್ ನಲ್ಲಿ ರಾಜನಾಥ ಸಿಂಗ್ ಹಾರಾಟ

ಡಿಜಿಟಲ್ ಕನ್ನಡ ಟೀಮ್:

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್’ ನಲ್ಲಿ  ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಗುರುವಾರ ಹಾರಾಟ ನಡೆಸಿದರು. ಅದರೊಂದಿಗೆ ಸ್ವದೇಶಿ ನಿರ್ಮಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇಂದು ಬೆಳಿಗ್ಗೆ 8:30ರಿಂದ 9 ಗಂಟೆ ವೆರೆಗೆ ತೇಜಸ್ ಯುದ್ಧ ವಿಮಾನದ ಬಗ್ಗೆ ರಕ್ಷಣಾ ಸಚಿವರಿಗೆ ಪೈಲೆಟ್ ಗಳಿಂದ ತೇಜಸ್ ಕುರಿತು ಮಾಹಿತಿ ಪಡೆದರು. ನಂತರ ಅರ್ಧ ಗಂಟೆಗಳ ಕಾಲ ರಾಜನಾಥ್ ಸಿಂಗ್ ತೇಜಸ್ ಯುದ್ಧ ವಿಮಾನದಲ್ಲಿ ಕೂತು ಆಗಸದಲ್ಲಿ ಹಾರಾಟ ನಡೆಸಿದರು.

ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾದ ತೇಜಸ್ ಅನ್ನು ಏರೋಸ್ಪೇಸ್ ಬೆಹೆಮೊಥ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ. ಕಳೆದ ಶುಕ್ರವಾರ ಗೋವಾದಲ್ಲಿ ಇದರ ಅಂತಿಮ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ ಈ ಪರೀಕ್ಷೆ ಯಶಸ್ವಿಯೂ ಆಗಿತ್ತು.

ಈ ಲಘು ಯುದ್ಧ ವಿಮಾನದ ವಿಶೇಷತೆಗಳನ್ನು ನೋಡುವುದಾದರೆ, ತರಬೇತಿ ಉದ್ದೇಶಕ್ಕಾಗಿ 2 ಸೀಟ್ ಗಳನ್ನು ಹೊಂದಿದೆ. ಪ್ರತಿ ಗಂಟೆಗೆ 1350 ಕಿಮೀ ವೇಗದಲ್ಲಿ ಹಾರುತ್ತದೆ. 40 ತೇಜಸ್ ಲಘು ಯುದ್ದ ವಿಮಾನದ ಪೈಕಿ ಭಾರತೀಯ ವಾಯುಪಡೆಗೆ 16 ವಿಮಾನಗಳನ್ನು ನೀಡಲಾಗಿದೆ. ಒಂದು ವಿಮಾನ ಮೌಲ್ಯ 300 ಕೋಟಿ ರೂ. ಇದಕ್ಕೆ ಬಳಸುವ ಇಂಜಿನ್ ಅಮೇರಿಕಾ ದೇಶದ್ದು, ರಾಡಾರ್ ಇಸ್ರೇಲ್ ನದ್ದು, ಕಾರ್ಬನ್ ಫೈಬರ್‌ನಿಂದ ನಿರ್ಮಿಸಿದ ಲಘುಯುದ್ಧ ವಿಮಾನವು  12 ಟನ್ ತೂಕ ಹೊಂದಿದೆ. ವಿಮಾನದ ರೆಕ್ಕೆಯ ಉದ್ದ 8.2 ಮೀಟರ್, ಒಟ್ಟು ಎತ್ತರ 4.4 ಮೀಟರ್, R-73 ಏರ್ ಟು ಏರ್ ಕ್ಷಿಪಣಿ ಅಳವಡಿಸಬಹುದು ಯುದ್ಧಾಸ್ತ್ರಗಳನ್ನು ಈ ತೇಜಸ್‌ನಲ್ಲಿ ಸಾಗಿಸಬಹುದಾಗಿದೆ.

Leave a Reply