ಬಿಗ್ ಬಾಸ್ 7ನೇ ಸೀಸನ್ ನಲ್ಲಿ ಕುರಿ ಪ್ರತಾಪ್ ಎಂಟ್ರಿ?

ಡಿಜಿಟಲ್ ಕನ್ನಡ ಟೀಮ್:

ಏಳನೇ ಆವೃತ್ತಿಯ ಬಿಗ್ ಬಾಸ್ ಶೋ ಕ್ರೇಜ್ ಕ್ರಮೇಣವಾಗಿ ಹೆಚ್ಚಾಗುತ್ತಿದೆ. ಶೋನ ಪ್ರಮೋಷನ್ ಬಿಡುಗಡೆಯಾದ ನಂತರ ಈ ಬಾರಿ ಯಾರೆಲ್ಲಾ ದೊಡ್ಡ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಅಂದಹಾಗೆ ಈ ಬಾರಿ ಜನಸಾಮಾನ್ಯ ವರ್ಗದ ಎಂಟ್ರಿ ಇಲ್ಲ. ಬರೋ 15 ಜನರೂ ಸೆಲೆಬ್ರಿಟಿಗಳೇ. ಶೋನ ಮೂಲಗಳ ಪ್ರಕಾರ ರಾಜಕೀಯ, ಸಿನೆಮಾ ಹಾಗೂ ಕಿರುತೆರೆಯಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ಕಿರುತೆರೆಯಲ್ಲಿ ಮಜಾ ಟಾಕೀಸ್ ಮೂಲಕ ಮನೆ ಮಾತಾಗಿರುವ ಕುರಿ ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ. ಪ್ರತಿ ವರ್ಷದಂತೆ ಸ್ಪರ್ಧಿಗಳ ಹೆಸರನ್ನು ಗೌಪ್ಯವಾಗಿಡಲು ಆಯೋಜಕರು ನಿರ್ಧರಿಸಿದ್ದು, ಖಚಿತ ಮಾಹಿತಿ ಸಿಕ್ಕಿಲ್ಲ.

ಕುರಿ ಪ್ರತಾಪ್ ಜತೆಗೆ ನಟಿ ಶರ್ಮಿಳಾ ಮಾಂಡ್ರೆ, ಅಮೂಲ್ಯ ಅವರ ಹೆಸರುಗಳು ಕೇಳಿ ಬರುತ್ತಿವೆ. ಇದಲ್ಲದೆ ಮಾಡೆಲಿಂಗ್ ಕ್ಷೇತ್ರದ ಒಂದಿಬ್ಬರು ಎಂಟ್ರಿ ಕೊಡೋ ಸಾಧ್ಯತೆ ಇದೆ.

Leave a Reply