ಕುಮಾರಸ್ವಾಮಿಯನ್ನು ಧರ್ಮರಾಯನಿಗೆ ಹೋಲಿಸಿದ ರೇವಣ್ಣ

ಡಿಜಿಟಲ್ ಕನ್ನಡ ಟೀಮ್:

‘ಮಾಜಿ ಸಿಎಂ ಕುಮಾರಸ್ವಾಮಿ ಧರ್ಮರಾಯ ಇದ್ದಂಗೆ. ಕಸದ ಬುಟ್ಟಿಯಲ್ಲಿ ಬಿದ್ದಿದ್ದವರನ್ನು ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದರು…’ ಇದು ಮಾಜಿ ಸಚಿವ ರೇವಣ್ಣ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯ ಗುಣಗಾನ ಮಾಡಿದ ಪರಿ.

ಪಕ್ಷಕ್ಕೆ ದ್ರೋಹ ಬಗೆದವರು ಹಾಗೂ ಪಕ್ಷ ಬಿಡಲು ನಿರ್ಧರಿಸಿರೋ ನಾಯಕರ ವಿರುದ್ಧ ಹಾಸನದಲ್ಲಿ ಹರಿಹಾಯ್ದ ರೇವಣ್ಣ ಹೇಳಿದ್ದಿಷ್ಟು… ‘ಕುಮಾರಸ್ವಾಮಿ ಧರ್ಮರಾಯ ಇದ್ದಂಗೆ. ಡಸ್ಟ್​​ಬಿನ್​ನಲ್ಲಿದ್ದವರನ್ನು, ಬೇಡದವರನ್ನು ತಂದು ಚುನಾವಣೆಗೆ ನಿಲ್ಲಿಸಿದರು ಇದು ದೇವೇಗೌಡ, ಹೆಚ್​ಡಿಕೆಯ ದೌರ್ಭಾಗ್ಯ. ಚುನಾವಣೆಗೆ ಕರೆತಂದು ಅವರ ಹಿನ್ನೆಲೆ ನೋಡದೆ ಟಿಕೆಟ್​ ಕೊಟ್ಟರು. ನಾನೇನು ಮಾಡಲಿ.

ಹಿಂದಿನ ಸರ್ಕಾರದ ಯೋಜನೆಗಳಿಗೆ ಬಿಜೆಪಿ ಶಾಸಕ ಪ್ರೀತಮ್ ಗೌಡ ಈಗ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಅಡಿಗಲ್ಲು ಹಾಕಿದ್ದ ಯೋಜನೆಗಳಿಗೆ ಬಿಜೆಪಿ ಶಾಸಕ ಗುದ್ದಲಿ ಪೂಜೆ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ರಸ್ತೆ ಅಭಿವೃದ್ಧಿಗಾಗಿ 100 ಕೋಟಿ ಹಣ ನೀಡಿದ್ದರು. ಅಲ್ಲದೇ 6 ತಿಂಗಳ ಹಿಂದೆ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಹಾಕಿದ್ದಾರೆ. ಇದಕ್ಕೆ 54 ಕೋಟಿ 37 ಲಕ್ಷ ಹಣ ಹಿಂದೆಯೇ ಬಿಡುಗಡೆಯಾಗಿದೆ.

ಈಗ ಮತ್ತೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಅಡಿಗಲ್ಲು ಹಾಕಿದ ಯೋಜನೆಗೆ ಬಿಜೆಪಿ ಶಾಸಕ ಗುದ್ದಲಿ ಪೂಜೆ ಮಾಡಿದ್ದಾರೆ. ಬಿಜೆಪಿ ಹೊಸ ಯೋಜನೆ ತರದೇ ಹಿಂದಿನ ಸರ್ಕಾರದ ಯೋಜನೆಗಳಿಗೆ ಮತ್ತೆ ಪೂಜೆ ಮಾಡುತ್ತಿದ್ದಾರೆ. ನಾನೇನು ಹಾಸನವನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ನನ್ನ ಸಾಮ್ರಾಜ್ಯ ಎಂದು ನಾನು ಯಾರಿಗಾದರೂ ಹೇಳಿದ್ದೀನಾ ? ನಮ್ಮ ಜಿಲ್ಲೆಯ ಅಭಿವೃದ್ದಿ ಕೆಲಸವಿದ್ದರೆ ಸಚಿವರ ಹತ್ತಿರ ಹೋಗುತ್ತೇನೆ. ಅಭಿವೃದ್ಧಿ ಕೆಲಸವಿದ್ದರೆ ಕೇಳುತ್ತೇವೆ, ಮಾಡಿದರೆ ಮಾಡಲಿ ಇಲ್ಲಾಂದ್ರೆ ಇಲ್ಲ.’

Leave a Reply