ಬಿಜೆಪಿಯಲ್ಲಿ ಶುರುವಾಯ್ತು ಬಂಡಾಯದ ಬಿಸಿ, ಕಮಲ ಟಿಕೆಟ್ ಎಂಟಿಬಿಗೋ… ಶರತ್ ಬಚ್ಚೆಗೌಡರಿಗೋ?

ಡಿಜಿಟಲ್ ಕನ್ನಡ ಟೀಮ್:

ಹೊಸಕೋಟೆ ಉಪಚುನಾವಣೆ ಈ ಬಾರಿಯ 15 ಕ್ತ್ರಗಳ ಉಪಚುನಾವಣೆಯ ಪೈಕಿ ಪ್ರತಿಷ್ಠೆಯ ಕಣವಾಗುವ ಎಲ್ಲ ಸಾಧ್ಯತೆಗಳು ಇವೆ. ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಸಂಘಟನೆಗೆ ಬೆವರು ಹರಿಸಿರುವ ಶರತ್ ಬಚ್ಚೆಗೌಡರಿಗೆ ಟಿಕೆಟ್ ನೀಡುತ್ತೋ ಅಥವಾ ಮೈತ್ರಿ ಸರ್ಕಾರ ಬೀಳಿಸಲು ಸಚಿವ ಸ್ಥಾನವನ್ನೂ ತ್ಯಾಗ ಮಾಡಿದ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡುತ್ತೋ ಸದ್ಯ ಎಲ್ಲರ ಕುತೂಹಲ ಕೆರಳಿಸಿರೋ ವಿಷಯ.

ಬಿಜೆಪಿಯ ಟಿಕೆಟ್ ಅನ್ನು ಶರತ್ ಬಚ್ಚೆಗೌಡ ಅವರಿಗೆ ನೀಡಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಸಿಎಂ ಯಡಿಯೂರಪ್ಪ ಅರ ಮನೆ ಮುಂದೆ ಪ್ರತಿಭಟನೆ ಕೂಡ ಮಾಡಲಾಗುತ್ತಿದೆ. ಒಂದು ವೇಳೆ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡಿದ್ದೇ ಆದರೆ ನಾವು ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಕಾರ್ಯಕರ್ತರು ಸ್ಪಷ್ಟವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಹೊಸಕೋಟೆಯಲ್ಲಿ ಇದೇ ಮೊದಲ ಬಾರಿಗೆ ಉಪಚುನಾವಣೆ ನಡೆಯುತ್ತಿದೆ. ಸಿದ್ದು ಆಪ್ತರಾಗಿದ್ದ ಎಂಟಿಬಿ ನಾಗರಾಜ್ ರನ್ನು ಸಚಿವರನ್ನಾಗಿ ಮಾಡಿದರೂ ಅದನ್ನು ಎಡಗಾಲಲ್ಲಿ ಒದ್ದು ಬಿಜೆಪಿ ಬಾಗಿಲ ಬಳಿ ನಿಂತಿರುವ ನಾಗರಾಜ್ ಅವರನ್ನು ಈ ಉಪಚುನಾವಣೆಲ್ಲಿ ಶತಾಯಗತಾಯ ಮಣಿಸಲೇಬೇಕು ಎಂಬುದು ಕಾಂಗ್ರೆಸ್ ಪಣತೊಟ್ಟಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೊಸಕೋಟೆಯಿಂದಲೇ ಉಪಚುನಾವಣೆಗೆ ಪ್ರಚಾರವನ್ನು ಇಲ್ಲಿಂದಲೇ ಆರಂಭಿಸಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿಯ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಶರತ್ ಬಚ್ಚೆಗೌಡ ಕಾರ್ಯಕರ್ತರ ಅಬ್ಯರ್ಥಿ. ಶರತ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂಬುದು ಕಮಲ ಕಾರ್ಯಕರ್ತರ ಬೇಡಿಕೆ. ಆದರೆ ಯಡಿಯೂರಪ್ಪ ತಾವು ಸಿಎಂ ಆಗಲು ಅನರ್ಹ ಶಾಸಕರಗೆ ನೀಡಲಾಗಿದ್ದ ಮಾತನ್ನು ಉಳಿಸಿಕೊಳ್ಳಬೇಕಾದ ಮಹತ್ವದ ಜವಾಬ್ದಾರಿ ಅವರ ಹೆಗಲ ಮೇಲಿದೆ. ಹೀಗಾಗಿ ಕಾರ್ಯಕರ್ತರ ಮನವಿಗೆ ಸ್ಪಂದಿಸಬೇಕೋ ಅಥವಾ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಎಂಟಿಬಿಗೆ ಟಿಕೆಟ್ ನೀಡಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಮತ್ತೊಂದೆಡೆ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದೇ ಆದರೆ ಶರತ್ ಬಚ್ಚೆಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಬಿಜೆಪಿಯ ತಪ್ಪು ನಿರ್ಧಾರಕ್ಕಾಗಿ ಕಾದು ಕುಳಿತಿದೆ. ಆಪರೇಷನ್ ಕಮಲಕ್ಕೆ ತುತ್ತಾದವರು ಹಣ ಹಾಗೂ ಅಧಿಕಾರದ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿದೆ. ಇದು ಎಂಟಿಬಿ ನಾಗರಾಜ್ ವಿರುದ್ಧ ಅಲೆ ನಿರ್ಮಾಣ ಮಾಡಲಿದೆ. ಅದರ ಜತೆಗೆ ಶರತ್ ಬಚ್ಚೆಗೌಡ ಅವರ ಕಾರ್ಯಕರ್ತರ ಪಡೆ ಬಿಜೆಪಿ ವಿರುದ್ಧ ನಿಲ್ಲುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಗೆ ಲಾಭ ಜಾಸ್ತಿ. ಹೀಗಾಗಿ ಈ ಕ್ಷೇತ್ರದ ಫಲಿತಾಂಶ ಜನರ ಗಮನ ಸೆಳೆಯಲಿದೆ.

Leave a Reply