ಮೆಹುಲ್ ಚೋಕ್ಸಿ ವಿರುದ್ಧ ತನಿಖೆಗೆ ಸಂಪೂರ್ಣ ಸಹಕಾರ: ಆಂಟಿಗುವಾ ಪಿಎಂ

ಡಿಜಿಟಲ್ ಕನ್ನಡ ಟೀಮ್:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ವಂಚನೆ ಮಾಡಿ ಪರಾರಿಯಾಗಿರೋ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ತನಿಖೆ ನಡೆಸಲು ಭಾರತದ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ಆಂಟಿಗುವಾ ಪ್ರಧಾನಿ ಗಾಸ್ಟೇನ್ ಬ್ರೌನ್ ತಿಳಿಸಿದ್ದಾರೆ.

‘ಚೋಕ್ಸಿ ಓರ್ವ ನಂಬಿಕೆದ್ರೋಹಿ. ಆತ ಒಬ್ಬ ಕ್ರಿಮಿನಲ್ ಎಂಬುದಕ್ಕೆ ಪೂರಕ ಸಾಕ್ಷಿಗಳು ಸಿಕ್ಕಿವೆ. ಆತನಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು. ಅವನ ವಿರುದ್ಧ ತನಿಖೆ ನಡೆಸಲು ಭಾರತ ಅಧಿಕಾರಿಗಳು ಸ್ವತಂತ್ರರು. ಸರಿಯಾದ ಪ್ರಕ್ರಿಯೆಗಳ ನಂತರ ಆತನನ್ನು ಹಸ್ತಾಂತರ ಮಾಡಲು ಸಿದ್ಧ’ ಎಂದು ಬ್ರೌನ್ ತಿಳಿಸಿದ್ದಾರೆ.

ಸಾವಿರಾರು ಕೋಟಿ ವಂಚನೆ ಮಾಡಿ ನೀರವ್ ಮೋದಿ ಹಾಗೂ ಅವರ ಸಂಬಂಧಿ ಚೋಕ್ಸಿ ಅವರು ಪರಾರಿಯಾಗಿದ್ದರು. ನೀರವ್ ಮೋದಿ ಲಂಡನ್ ಸೇರಿದರೆ, ಚೋಕ್ಸಿ ಆಂಟಿಗುವಾ ನಾಗರೀಕತ್ವ ಪಡೆದು ತಲೆಮರೆಸಿಕೊಂಡಿದ್ದರು. ಸದ್ಯ ನೀರವ್ ಲಂಡನ್ ನಲ್ಲಿ ಬಂಧನವಾಗಿ ಜೈಲು ಸೇರಿದ್ದಾನೆ. ಆತನ ಹಸ್ತಾಂತರ ಪ್ರಕ್ರಿಯೆ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈಗ ಚೋಕ್ಸಿ ವಿರುದ್ಧದ ತನಿಖೆಗೆ ಅವಕಾಶ ನೀಡುವುದಾಗಿ ತಿಳಿಸಿರೋದು ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಹೆಚ್ಚಿನ ಬಲ ಸಿಕ್ಕಿದೆ.

Leave a Reply