ಉಪಚುನಾವಣೆಗೆ ಸುಪ್ರೀಂ ತಡೆಯಾಜ್ಞೆ! ಮುಂದುವರಿಯಲಿದೆ ಅನರ್ಹರ ಗೊಂದಲ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ತಿಂಗಳು 21ರಂದು ನಿಗದಿಯಾಗಿದ್ದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಅನರ್ಹತೆ ತೀರ್ಪು ವಿರುದ್ಧ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ, ಉಪಚುನಾವಣೆಗೆ ತಡೆ ನೀಡಿದ್ದು, ಸ್ಪೀಕರ್ ಅವರ ಅನರ್ಹತೆ ತೀರ್ಪು ಮುಂದುವರಿಯಲಿದೆ. ಇದು ಉಪಚುನಾವಣೆ ಎಂಬ ಬೀಸೋ ದೊಣ್ಣೆಯಿಂದ ಅನರ್ಹರು ಪಾರಾಗಿದ್ದಾರೆ. ಆದರೆ ಅನರ್ಹರಾಗಿಯೇ ತ್ರಿಶಂಕು ಸ್ಥಿತಿಯಲ್ಲಿ ಮುಂದುವರಿಯಬೇಕಿದೆ.

ಅನರ್ಹತೆ ತೀರ್ಪಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ. ಅಲ್ಲದೆ ನ್ಯಾಯಾಲಯದ ಸೂಚನೆ ಸಿಗುವವರೆಗೂ ಉಪಚುನಾವಣೆ ನಡೆಸಬಾರದು ಎಂದು ಸೂಚನೆ ನೀಡಿದ್ದಾರೆ.

Leave a Reply