ಬಿಬಿಎಂಪಿಯಲ್ಲಿ ಮೇಯರ್ ಚುನಾವಣೆ: ಮುಳುವಾಗುತ್ತಾ ಬಿಜೆಪಿ ಆಂತರಿಕ ಭಿನ್ನಮತ?

ಡಿಜಿಟಲ್ ಕನ್ನಡ ಟೀಮ್:

ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆ ನಡೆಯುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಮಪತ್ರ ಸಲ್ಲಿಕೆಯಾಗಲಿದ್ದು ಈ ಬಾರಿ ಮೇಯರ್ ಪಟ್ಟ ಪಡೆಯುವ ತವಕದಲ್ಲಿರೋ ಬಿಜೆಪಿಗೆ ಆಂತರಿಕ ಭಿನ್ನಮತ ಮುಳುವಾಗುತ್ತಾ ಎಂಬ ಅನುಮಾನ ಮೂಡಿದೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸತ್ಯನಾರಾಯಣ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ದತ್ತಾತ್ರೇಯ ದೇವಸ್ಥಾನ ವಾರ್ಡ್ ಕಾರ್ಪೊರೇಟರ್ ಆಗಿರುವ ಸತ್ಯನಾರಾಯಣ, ಕಾಂಗ್ರೆಸ್ ಆಡಳಿತ ಪಕ್ಷದ ನಾಯಕರಾಗಿದ್ದರು‌ 2 ಬಾರಿ ಕಾರ್ಪೊರೇಟರ್ ಆಗಿರುವ ಸತ್ಯನಾರಾಯಣ್, ಮೈತ್ರಿ ಸದಸ್ಯರನ್ನು ಒಮ್ಮತದಿಂದ ಕರೆದುಕೊಂಡು ಹೋಗುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಆಯ್ಕೆ ಮಾಡಲಾಗಿದೆ.

ಇನ್ನು ಬಿಜೆಪಿಯಿಂದ ಜೈನ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತ ಕಾರ್ಪೊರೇಟರ್ ಗೌತಮ್ ಅವರನ್ನು ಆಯ್ಕೆ ಮಾಡಲಾಗಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೋಗುಪಾಳ್ಯ ವಾರ್ಡ್‌ನಿಂದ ಎರಡು ಬಾರಿ ಕಾರ್ಪೊರೇಟರ್ ಆಗಿದ್ದಾರೆ. ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತ ಆಗಿರುವ ಗೌತಮ್, ಸಂಘದ ಪ್ರಮುಖ ರಾಮ್ ಲಾಲ್ ಹಿಂಬಾಲಕರಾಗಿದ್ದಾರೆ. ಜೊತೆಗೆ ಬಿಜೆಪಿ ಯುವ ಮೋರ್ಚಾದ ರಾಜ್ಯ ಖಜಾಂಚಿ ಆಗಿರುವ ತುಳಸಿ ಮುನಿರಾಜು ಗೌಡ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ ಅನುಭವದ ಜೊತೆಗೆ ನಗರ ಯೋಜನಾ ಸ್ಥಾಯಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2013 ರಲ್ಲಿ ಶಾಂತಿನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೌತಮ್ ಅವರಿಗೆ ಬಿಎಸ್‌ವೈ ಟಿಕೆಟ್ ತಪ್ಪಿಸಿದರು ಎನ್ನುವ ಆರೋಪವೂ ಇದೆ. ಮೂಲತಃ ಉದ್ಯಮಿಯಾದ ಗೌತಮ್, ಬಿಕಾಂ ಪದವೀಧರ ಆಗಿದ್ದಾರೆ.

ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬೇಸರಗೊಂಡಿದ್ದು, ಬಿಬಿಎಂಪಿ ಚುನಾವಣೆಯಿಂದ ದೂರ ಉಳಿದಿದ್ದಾರೆ. ನಳೀನ್ ಕುಮಾರ್ ಕಟೀಲ್ ಮೇಯರ್ ಆಯ್ಕೆ ಸಂಬಂಧ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ನಗರ ಶಾಸಕರ ನಿರ್ಧಾರಕ್ಕೂ ಬೆಲೆ ಕೊಡಲಿಲ್ಲ ಎನ್ನಲಾಗಿದೆ. ಪದ್ಮನಾಭರೆಡ್ಡಿ ಮೇಯರ್ ಅಭ್ಯರ್ಥಿ ಮಾಡದಿದ್ರೆ ನಾವು ಬಿಜೆಪಿ ಪರವಾಗಿ ಮತ ಚಲಾಯಿಸಲ್ಲ ಅನ್ನೋ ಸಂದೇಶವನ್ನು ಪಕ್ಷೇತರ ಸದಸ್ಯರು ಈಗಾಗಲೇ ರವಾನೆ ಮಾಡಿದ್ದಾರೆ ಎನ್ನಲಾಗಿದೆ.ಬಿಎಸ್‌ವೈ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಪದ್ಮನಾಭರೆಡ್ಡಿ ಅವರು ಕಳೆದ ನಾಲ್ಕು ವರ್ಷದಿಂದ ವಿಪಕ್ಷ ನಾಯಕನ ಸ್ಥಾನದಲ್ಲಿದ್ದು, ಈ ಬಾರಿ ಮೇಯರ್ ಆಕಾಂಕ್ಷಿ ಆಗಿದ್ದರು. ಇದೀಯ ಯಡಿಯೂರಪ್ಪ ಅವರಿಗೆ ನಳೀನ್ ಕುಮಾರ್ ಸಡ್ಡು ಹೊಡೆದಿರುವ ಕಾರಣಕ್ಲೆ ಪಕ್ಷೇತರರು ದಿಕ್ಕು ಬದಲಿಸಿದ್ರೆ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಮೇಯರ್ ಅಗಲಿದ್ದಾರೆ ಎನ್ನಲಾಗ್ತಿದೆ. ಆದರೆ ಕಡೇ ಕ್ಷಣದಲ್ಲಿ ಬಿಜೆಪಿಯಿಂದ ಪದ್ಮನಾಭರೆಡ್ಡಿ ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಎಂದು ಅಶೋಕ್ ಹೇಳಿಕೆ ಗೌತಮ್ ಆಯ್ಕೆಗೆ ಹೆಚ್ಚು ಅವಕಾಶ ಸೃಷ್ಟಿಯಾಯಿತು.

ಒಟ್ಟು 257 ಮತಗಳಿದ್ದು, ಬಿಜೆಪಿಗೆ 125, ಕಾಂಗ್ರೆಸ್ 104, ಜೆಡಿಎಸ್ 21, ಪಕ್ಷೇತರ 07, ಗೆಲ್ಲಲು 129 ಮತಗಳ ಅವಶ್ಯಕತೆ ಇದ್ದು, ಕಾಂಗ್ರೆಸ್ ಜೆಡಿಎಸ್ 125, ಬಿಜೆಪಿ 125 ಮತಗಳ ಜೊತೆ ಸಮಬಲ ಸಾಧಿಸಿದೆ. ಪಕ್ಷೇತರ ಸದಸ್ಯರೇ ನಿರ್ಣಾಯಕ ಆಗಿದ್ದು, ಮೈತ್ರಿಗೆ ನಾಲ್ಕು ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಗೈರಾಗುತ್ತಿರುವ ಹಿನ್ನೆಲೆಯಲ್ಲಿ 6 ಮತಗಳ ಅವಶ್ಯಕತೆ ಇದೆ.

Leave a Reply