ನಮ್ಮಪ್ಪ ಪುಗ್ಸಟ್ಟೆ ಸಿಎಂ ಆಗಿಲ್ಲ ಎಂದ ವಿಜಯೇಂದ್ರಗೆ ಜೆಡಿಎಸ್ ಟಾಂಗ್!

ಡಿಜಿಟಲ್ ಕನ್ನಡ ಟೀಮ್:

ರಿಯಲ್ ಎಸ್ಟೇಟ್, ಬಿಲ್ಡರ್ಸ್ ಗಳಿಂದ ಹಣ ಕಿತ್ತಿರುವ ಯಡಿಯೂರಪ್ಪ ಪುಗ್ಸಟ್ಟೆ ಸಿಎಂ ಆಗಲು ಹೇಗೆ ಸಾಧ್ಯ? ಇದು ಜೆಡಿಎಸ್ ರಾಜ್ಯ ಘಟಕ ಟ್ವಿಟ್ಟರ್ ನಲ್ಲಿ ಕುಟುಕಿದೆ.

ನಿನ್ನೆ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ, “ನಮ್ಮಪ್ಪ ಪುಕ್ಸಟ್ಟೆ ಸಿಎಂ ಆಗಿಲ್ಲ” ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಜೆಡಿಎಸ್, “ಯಡಿಯೂರಪ್ಪ ಅವರು ‘ಪುಕ್ಸಟ್ಟೆ’ ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ ಬಿಜೆಪಿ ವರಿಷ್ಠ ವಿಜಯೇಂದ್ರ ಹೇಳಿದ್ದಾರೆ. ಹೌದು ವರಿಷ್ಠರೇ ವರ್ಗಾವಣೆಗೆ ದುಡ್ಡು, ಬಿಲ್ಡರ್​ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್​ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ ‘ಪುಕ್ಸಟ್ಟೆ’ ಆಗಲು ಸಾಧ್ಯವೇ?” ಎಂದು ಪ್ರಶ್ನೆ ಮಾಡಿದೆ.

Leave a Reply