ಬಿಗ್ ಬಾಸ್ ಗೊಂಬೆ ಮನಗೆದ್ದ ರ‌್ಯಾಪರ್ ಚಂದನ್ ಶೆಟ್ಟಿ..!

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ಮನೆಯಲ್ಲಿ ಗೊಂಬೆ… ಗೊಂಬೆ… ಎಂದು ಹಾಡು ಹಾಡಿ ನಿವೇದಿತಾ ಗೌಡ ಅವರ ಜತೆ ಸ್ನೇಹ ಬೆಳೆಸಿದ್ದ ರಾಪರ್ ಚಂದನ್ ಶೆಟ್ಟಿ ಈಗ ಪ್ರೇಮವನ್ನು ಹೇಳಿಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮ ವೇದಿಕೆಯಲ್ಲೆ ಬಹಿರಂಗವಾಗಿ ನಿವೇದಿತಾರಿಗೆ ಪ್ರಪೋಸ್ ಮಾಡಿದ​ ಚಂದನ್​ ಶೆಟ್ಟಿ ಉಂಗುರವನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಾಸನ ಮೂಲದ ಚಂದನ್​ ಶೆಟ್ಟಿ ಇತ್ತೀಚಿಗಷ್ಟೇ ರಾಪ್​ ಸಾಂಗ್​ಗಳ ಮೂಲಕ ಕನ್ನಡ ಸಂಗೀತ ಲೋಕದಲ್ಲಿ ಕೈಚಳಕ ತೋರಿಸಿದ್ರು.

ಸಾವಿರಾರು ಜನರ ಸಮ್ಮುಖದಲ್ಲಿ ತಮ್ಮ ಪ್ರೀತಿಯನ್ನ ಬಹಿರಂಗ ಮಾಡಿದ್ರು. ನಿವೇದಿತಾ ಗೌಡ ಒಪ್ಪಿಗೆ ಕೊಡ್ತಿದ್ದ ಹಾಗೆ ಉಂಗುರ ತೊಡಿಸಿ , ಆಲಂಗಿಸಿ ಸಂಭ್ರಮ ವ್ಯಕ್ತಪಡಿಸಿದ್ರು. ಅವರ ಈ ಪ್ರಪೋಸ್ ವೀಡಿಯೋ ವೈರಲ್ ಆಗಿದೆ.

105 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಈ ಜೋಡಿ, ಮೊದಮೊದಲು ಅಷ್ಟಕಷ್ಟೇ ಎನ್ನುವಂತಿತ್ತು. ಆ ಬಳಿಕ ಬಿಗ್‌ಬಾಸ್ ಕೋಳ ತೊಡಿಸಿ ವಾರಗಟ್ಟಲೆ ಜೊತೆಯಲ್ಲೇ ಇರುವಂತೆ ಆದೇಶ ಮಾಡಿದ ಬಳಿಕ ಇವರಿಬ್ಬರ ಸ್ನೇಹ ಗಾಢವಾಯ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ್ರು. ಸ್ನೇಹ ಪರಸ್ಪರ ಪ್ರೀತಿಯಾಯ್ತು. ಇಬ್ಬರು ಕಲರ್ಸ್ ಕನ್ನಡ ವಾಹಿನಿಯಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದು, ಇದೀಗ ಇವರಿಬ್ಬರೂ ಬಾಳ ಸಂಗಾತಿಯಾಗಲು ಬಯಸಿದ್ದಾರೆ.

ಇವರಿಬ್ಬರು ಪ್ರಣಯ ಪಕ್ಷಿಗಳು ಎಂದು ವರ್ಷದ ಸುದ್ದಿ ಹರಿದಾಡಿತ್ತು. ಆದರೆ ನಮ್ಮಿಬ್ಬರ ನಡುವೆ ಅಂತಾದ್ದೇನಿಲ್ಲ ಎಂದಿದ್ದ ಚಂದನ್, ಈಗ ಅದೇ ಸುದ್ದಿಯನ್ನು ನಿಜ ಮಾಡಿದ್ದಾರೆ.

Leave a Reply