ದಬಾಂಗ್3 ‘ಬಲ್ಲಿ ಸಿಂಗ್’ ಆಗಿ ಕಿಚ್ಚನ ಅವತಾರ! ಸುದೀಪ್ ಪಾತ್ರದ ಬಗ್ಗೆ ಸಲ್ಲು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಈ ವರ್ಷ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ದಬಾಂಗ್ 3ನಲ್ಲಿ ಕನ್ನಡದ ಕಿಚ್ಚ ಸುದೀಪ್ ಅವರು ಸಲ್ಮಾನ್ ಖಾನ್ ಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ.

ಬಲ್ಲಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ಕಿಚ್ಚ ಸುದೀಪ್, ತೆಲುಗಿನ ಈಗ ಸಿನಿಮಾ ನಂತರ ಮತ್ತೆ ನೆಗೆಟಿವ್ ಪಾತ್ರದಲ್ಲಿ ಅಬ್ಬರಿಸಲು ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದಲ್ಲಿ ಸುದೀಪ್ ಹಾಗೂ ಸಲ್ಮಾನ್ ಖಾನ್ ಕ್ಲೈಮಾಕ್ಸ್ ನಲ್ಲಿ ಟಾಪ್ ಲೆಸ್ ಫೈಟ್ ಮಾಡಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಚಿತ್ರದಲ್ಲಿ ಸುದೀಪ್ ಅವರ ಮೊದಲ ಲುಕ್ ಅನ್ನು ಸಲ್ಮಾನ್ ಖಾನ್ ಬಿಡುಗಡೆ ಮಾಡಿದ್ದು, ‘ಚಿತ್ರದಲ್ಲಿ ವಿಲನ್ ಎಷ್ಟು ಪ್ರಬಲಶಾಲಿಯಾಗಿರುತ್ತಾನೋ ಅವನನ್ನು ಮಣಿಸಲು ಅಷ್ಟೇ ಮಜಾ ಬರುತ್ತೆ. ದಬಾಂಗ್ 3ನಲ್ಲಿ ಕಿಚ್ಚ ಸುದೀಪ್ ಅವರನ್ನು ಬಲ್ಲಿ ಸಿಂಗ್ ಆಗಿ ಪರಿಚಯಿಸಲಾಗುತ್ತಿದೆ’ ಎಂದು ಹೇಳಿದರು. ಡಿಸೆಂಬರ್ 20ಕ್ಕೆ ಚುಲ್ ಬುಲ್ ಪಾಂಡೆ ಹಾಗೂ ಬಲ್ಲಿ ಸಿಂಗ್ ಕಾದಾಟ ತೆರೆಮೇಲೆ ಪ್ರದರ್ಶನವಾಗಲಿದೆ.

Leave a Reply