1400 ಕಿ.ಮೀ ಉದ್ದದ ‘ಗ್ರೇಟ್ ಗ್ರೀನ್ ವಾಲ್’! ಸರ್ಕಾರದ ಹೊಸ ಯೋಜನೆ ಗುರಿ ಏನು?

ಡಿಜಿಟಲ್ ಕನ್ನಡ ಟೀಮ್:

ಮಣ್ಣಿನ ಸವೆತ, ಪರಿಸರ ಸಂರಕ್ಷಣೆ, ಅರಣ್ಯ ನಾಶದಂತಹ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ 1400 ಕಿ.ಮೀ ಉದ್ದದ ಹಸಿರು ಗೋಡೆ ನಿರ್ಮಾಣಕ್ಕೆ ನಿರ್ಧರಿಸಿದೆ.

ಅಂದಹಾಗೆ ಹಸಿರು ಗೋಡೆ ಅಂದರೆ ಇಟ್ಟಿಗೆ ಸೀಮೆಂಟ್ ನಿಂದ ಕಟ್ಟೋ ಗೋಡೆ ಅಲ್ಲ, 1400 ಕಿ.ಮೀ ಉದ್ದ ಹಾಗೂ 5 ಕಿಮೀ ಅಗಳದಷ್ಟು ಪ್ರದೇಶದಲ್ಲಿ ಮರಗಳನ್ನು ಬೆಳೆಸುವುದು. ಗುಜಾರಾತ್ ನಿಂದ ದೆಹಲಿ, ಹರ್ಯಾಣ ರಾಜ್ಯಗಳ ಗಡಿ ಭಾಗದಲ್ಲಿ ಈ ಹಸಿರು ಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಯೋಜನೆ ಪ್ರಸ್ತಾವನೆ ಹಂತದಲ್ಲಿದ್ದು, ಒಪ್ಪಿಗೆ ಪಡೆಯಲು ಅಧಿಕಾರಿಗಳಲ್ಲಿ ಹಾಗೂ ಅನೇಕ ಸಚಿವರುಗಳ ಉತ್ಸಾಹ ಹೆಚ್ಚಿದೆ.

ಈ ಯೋಜನೆಗೆ ಅಂತಿಮ ಒಪ್ಪಿಗೆ ಸಿಕ್ಕರೆ, ಹವಾಮಾನ ವೈಪರೀತ್ಯ, ಮಣ್ಣಿನ ಸವೆತದಂತಹ ಜಾಗತೀಕ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಭಾರತದ ಯೋಜನೆ ಇತರರಿಗೆ ಮಾದರಿ ಆಗಲಿದೆ.

ಇನ್ನು ಪೋರಬಂದರ್ ನಿಂದ ಪಾಣಿಪಾತ್ ವರೆಗೆ ನಿರ್ಮಾಣ ಮಾಡುವ ಈ ಹಸಿರು ಗೋಡೆ ಯೋಜನೆಯಿಂದ ಗುಜರಾತ್, ರಾಜಸ್ಥಾನ್, ಹರ್ಯಾಣ, ದೆಹಲಿಯ ಆರಾವಳಿ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ನಿರ್ಮಾಣ ಮಾಡುವುದರ ಜತೆಗೆ ಪಾಕಿಸ್ತಾನದ ಗಡಿ ಹಾಗೂ ಪಶ್ಚಿಮ ಭಾರತದಲ್ಲಿರುವ ಮರಳುಗಾಡಿನಿಂದ ಬರುವ ಧೂಳು ಬಿರುಗಾಳಿಗೂ ಬ್ರೇಕ್ ಹಾಕುವ ಲೆಕ್ಕಾಚಾರ ಇದೆ.

ಇದರಿಂದ 2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ನಿರ್ಮಾಣವಾಗುತ್ತದೆ. ಒಟ್ಟಿನಲ್ಲಿ ವಾಯುಮಾಲಿನ್ಯ ಸೇರಿದಂತೆ ಅತಿಯಾದ ಉಷ್ಣತೆ ಸಮಸ್ಯೆ ಎದುರಿಸುತ್ತಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಈ ಯೋಜನೆ ಉತ್ತಮ ಪರಿಹಾರವಾಗುವ ನಿರೀಕ್ಷೆ ಇದೆ.

Leave a Reply