ಎಸ್ ಬಿಐಗೆ ಪಾವತಿಯಾಗದ ಸಾಲದ ಮೊತ್ತ ಎಷ್ಟು ಗೊತ್ತಾ!

ಡಿಜಿಟಲ್ ಕನ್ನಡ ಟೀಮ್:

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಹೆಚ್ಚು ಪ್ರಮಾಣದ ಕೆಟ್ಟ ಸಾಲವನ್ನು ಎದುರಿಸುತ್ತಿದೆ. 2019ರ ಮಾರ್ಚ್ 31ರ ವೇಳೆಗೆ ಎಸ್ ಬಿಐಗೆ ಪಾವತಿಯಾಗದ (ಕೆಟ್ಟ ಸಾಲ) ಸಾಲದ ಮೊತ್ತ ಬರೋಬ್ಬರಿ 76,600 ಕೋಟಿ ರುಪಾಯಿಗಳು.

ಹೌದು, ದೇಶದಲ್ಲಿ ಆರ್ಥಿಕ ಅಪರಾಧ, ಸುಸ್ಥಿದಾರರ ಪ್ರಮಾಣ ಹೆಚ್ಚಾಗಿದ್ದು, ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ ಅವರ ಪ್ರಕರಣಗಳನ್ನು ನಾವು ಉದಾಹರಣೆಯಾಗಿ ನೋಡಿದ್ದೇವೆ. ಎಸ್ ಬಿಐನ ಮಾಹಿತಿ ಪ್ರಕಾರ 76 ಸಾವಿರ ಕೋಟಿ ಕೆಟ್ಟ ಸಾಲದ ಪೈಕಿ 220 ಮಂದಿ ತಲಾ 100 ಕೋಟಿಗೂ ಹೆಚ್ಚು ಸಾಲ ಪಡೆದು ಅದನ್ನು ಪಾವತಿಸದೇ ಸುಸ್ಥಿದಾರರಾಗಿದ್ದಾರೆ.

ಇಷ್ಟೇ ಅಲ್ಲ ಇನ್ನು ವಸೂಲಾಗದ ಸಾಲದ ಪ್ರಮಾಣ ಕೂಡ ಕಮ್ಮಿ ಏನಿಲ್ಲ. ಒಟ್ಟು 37,700 ಕೋಟಿ ವಸೂಲಾಗದ ಸಾಲವಾಗಿದ್ದು, ಇದರಲ್ಲಿ 33 ಸಾಲಗಾರರು 500 ಕೋಟಿಗೂ ಹೆಚ್ಚು ಮೊತ್ತದ ಸಾಲ ಮಾಡಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಕೆಟ್ಟ ಸಾಲದಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಿಸಿದ್ದು, 1.76 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದೆ.

ಗ್ರಾಫಿಕ್ಸ್: News18

Leave a Reply