ಬ್ರಾಡ್ಮನ್, ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ತಲೆಮಾರಿನ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಬಿಂಬಿತವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ (254*) ಬಾರಿಸಿದ್ದಾರೆ. ಈ ಇನ್ನಿಂಗ್ಸ್ ಮೂಲಕ ಸರ್ ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಮುರಿದಿದ್ದಾರೆ.

ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 601 ರನ್ ಕಲೆಹಾಕಿ ಡಿಕ್ಲೇರ್ ಮಾಡಿತು. ತಂಡದ ಪರ ಕೊಹ್ಲಿ ಅಮೋಘ ಇನ್ನಿಂಗ್ಸ್ ಆಡಿದರು ಉಳಿದಂತೆ ರವೀಂದ್ರ ಜಡೇಜಾ(91), ರಹಾನೆ (58) ಉತ್ತಮ ಕಾಣಿಕೆ ನೀಡಿದರು.

ಈ ಇನ್ನಿಂಗ್ಸ್ ಮೂಲಕ ಕೊಹ್ಲಿ ಅನೇಕ ದಾಖಲೆ ಬರೆದು ಮೈಲಿಗಲ್ಲು ಸಾಧಿಸಿದ್ದಾರೆ. ಅವುಗಳೆಂದರೆ…

  • ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ 7ನೇ ದ್ವಿಶತಕ ದಾಖಲು.
  • ಭಾರತದ ಪರ ಅತಿ ಹೆಚ್ಚು ದ್ವಿಶತಕ ಬಾರಿಸಿದ ಆಟಗಾರ ಕೊಹ್ಲಿ. (ಈ ಹಿಂದೆ ಸಚಿನ್ 6, ಸೆಹ್ವಾಗ್ 6 ದ್ವಿಶತಕ ಗಳಿಸಿದ್ದರು).
  • ಇನ್ನು ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಕೊಹ್ಲಿ 40ನೇ ಶತಕ. ಆ ಮೂಲಕ ವಿಶ್ವದ ಪಟ್ಟಿಯಲ್ಲಿ ಎರಡನೇ ಸ್ಥಾನ. (ನಾಯಕನಾಗಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದವರ ಪೈಕಿ ರಿಕಿ ಪಾಂಟಿಂಗ್ 41, ಗ್ರೇಮ್ ಸ್ಮಿತ್ 33, ಸ್ಟೀವ್ ಸ್ಮಿತ್ 20, ಮೈಕಲ್ ಕ್ಲಾರ್ಕ್ 19.)
  • ನಾಯಕನಾಗಿ ಅತಿ ಹೆಚ್ಚು 150+ ರನ್ ಬಾರಿಸಿದ ಪಟ್ಟಿಯಲ್ಲಿ ಕೊಹ್ಲಿ, ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ದಾಖಲೆ ಮುರಿದಿದ್ದಾರೆ. (ಕೊಹ್ಲಿ 9ನೇ ಬಾರಿ ಈ ಸಾಧನೆ ಮಾಡಿದ್ದು, ಬ್ರಾಡ್ಮನ್ 8 ಬಾರಿ 150+ ರನ್ ಗಳಿಸಿದ್ದರು.)

Leave a Reply