ಭಾರತ ಸೇನೆಗಾಗಿ ಬೆಂಗಳೂರಲ್ಲಿ ತಯಾರಾಗುತ್ತಿದೆ ಸ್ವದೇಶಿ ನೀರ್ಮಿತ ಸ್ನೈಪರ್ಸ್!

ಡಿಜಿಟಲ್ ಕನ್ನಡ ಟೀಮ್:

ಭಾರತವನ್ನು ರಕ್ಷಣಾ ವ್ಯವಸ್ಥೆಯ ಜಾಲವನ್ನಾಗಿ ಮಾಡಲು ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ರಕ್ಷಣಾ ವ್ಯವಸ್ಥೆಯ ಶಸ್ತ್ರಾಸ್ತ್ರಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಭಾರತದಲ್ಲೇ ನಿರ್ಮಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಭಾರತೀಯ ಸೇನಾ ಪಡೆಗೆ ಅಗತ್ಯವಿರುವ ಎರಡು ಮಾದರಿಯ ಸ್ನೈಪರ್ಸ್ ಗಳನ್ನು ಬೆಂಗಳೂರು ಮೂಲಕ ಕಂಪನಿ ನಿರ್ಮಿಸಿದೆ.

ಎಸ್ಎಸ್ಎಸ್ ಡಿಫೆನ್ಸ್ ಕಂಪನಿಯು ಎರಡು ಮಾದರಿಯ ಸ್ನೈಪರ್ ರೈಫಲ್ ಗಳನ್ನು ನಿರ್ಮಿಸಿದ್ದು, ಭಾರತ ಶಸ್ತ್ರಾಸ್ತ್ರ ತಯಾರಿಸಿ ರಫ್ತು ಮಾಡುವ ಕಾಲ ಸನಿಹವಾಗುವ ನಿರೀಕ್ಷೆ ಮೂಡಿಸಿದೆ. ಕಂಪನಿಯು ಸದ್ಯ ಉತ್ತಮ ಗುಣಮಟ್ಟದ 7.62X51 ಎಂಎಂ ಮತ್ತು .338 ಲಪುವಾ ಮ್ಯಾಗ್ನಮ್ ಶ್ರೇಣಿ ಸ್ನೈಪರ್ಸ್ ಗಳನ್ನು ನಿರ್ಮಿಸಿದೆ.

ಈ ಬಗ್ಗೆ ಮಾತನಾಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಆರ್ ಮಚನಿ, ‘ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಯಾದ ಬಳಿಕ ನಾವು ಎರಡು ಮಾದರಿಯ ಸ್ನೈಪರ್ಸ್ ರೈಫಲ್ ಗಳ ವಿನ್ಯಾಸ ಹಾಗೂ ತಯಾರಿಯನ್ನು ಆರಂಭಿಸಿದೆವು. ನಾವು ನಿರ್ಮಿಸಿರುವ ಸ್ನೈಪರ್ಸ್ ಪೂರ್ಣ ಪ್ರಮಾಣದಲ್ಲಿ ಸ್ವದೇಶಿ ನಿರ್ಮಿತವಾಗಿದೆ. ನಾವು ಸಾಮಾನ್ಯವಾಗಿ ರಕ್ಷಣಾ ವಲಯಕ್ಕೆ ಉಪಕರಣಗಳ ಭಾಗಗಳನ್ನು ಪೂರೈಸುತ್ತಿದ್ದೆವು. ಈಗ ಶಸ್ತ್ರಾಸ್ತ್ರ ಸಿದ್ಧಪಡಿಸಿದ್ದು, ನಮ್ಮ ಶಸ್ತ್ರಾಸ್ತ್ರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇನ್ನಷ್ಟು ಹೆಚ್ಚು ಅಧ್ಯಯನ ಹಾಗೂ ಪರಿಶ್ರಮ ಹಾಕಲಾಗುವುದು’ ಎಂದಿದ್ದಾರೆ.

Leave a Reply