ಇನ್ನು ಕಾಲಾವಕಾಶ ಇಲ್ಲ, ಇಂದು 5 ಗಂಟೆಗೆ ಅಯೋಧ್ಯೆ ವಿಚಾರಣೆ ಅಂತ್ಯ: ಸಿಜೆಐ

ಡಿಜಿಟಲ್ ಕನ್ನಡ ಟೀಮ್:

ಅಯೋಧ್ಯೆ ವಿವಾದಿತ ಭೂಮಿ ಪ್ರಕರಣದ ವಿಚಾರಣೆ ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ. ಇಂದು ಸಂಜೆ 5ಕ್ಕೆ ವಿಚಾರಣೆ ಅಂತ್ಯವಾಗಲಿದೆ… ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ.

ಹಿಂದೂ ಮಹಾಸಭಾ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ಪಂಚ ಸದಸ್ಯರ ಪೀಠ, ಅಯೋಧ್ಯೆ ಪ್ರಕರಣಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ. ಪ್ರತಿನಿತ್ಯ ನಡೆಯುತ್ತಿರುವ ಸರಣಿ ವಿಚಾರಣೆಯಲ್ಲಿ ಇಂದು 40ನೇ ದಿನವಾಗಿದೆ.

ಇನ್ನು ಸುಪ್ರೀಂಕೋರ್ಟ್ ನೇಮಿತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಫ್.ಎಂ.ಐ ಖಲಿಫುಲ್ಲಾ ಅವರ ನೇತೃತ್ವದ, ಸಂಧಾನಕಾರ ಶ್ರೀರಾಮ್ ಪಂಚು, ಆಧ್ಯಾತ್ಮ ಗುರು ರವಿಶಂಕರ್ ಗುರೂಜಿ ಅವರ ಸಮಿತಿಯು ಇಂದು ತನ್ನ ವರದಿಯನ್ನು ನ್ಯಾಯಾಲಯಕ್ಕೆ ನೀಡಲಿದೆ.

ಮಂಗಳವಾರ ನಡೆದ ವಿಚಾರಣೆ ವೇಳೆ, ಮೊಘಲರು ರಾಮಜನ್ಮ ಭೂಮಿಯಲ್ಲಿ ಮಸೀದಿ ನಿರ್ಮಿಸಿ ಐತಿಹಾಸಿಕ ಪ್ರಮಾದ ಮಾಡಿದ್ದು, ನ್ಯಾಯಾಲಯ ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿತ್ತು.

ಇಂದು ವಿಚಾರಣೆ ಮುಕ್ತಾಯವಾಗುತ್ತಿದ್ದು, ಎಲ್ಲರ ಚಿತ್ತ ನಾಳಿನ ತೀರ್ಪಿನ ಮೇಲೆ ನೆಟ್ಟಿದೆ.

Leave a Reply