ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೈಡ್ರಾಮಾ! ಆದ್ರೂ ಮುಗಿಲಿಲ್ಲ ವಿಶ್ವನಾಥ್- ಸಾರಾ ತಿಕ್ಕಾಟ

ಡಿಜಿಟಲ್ ಕನ್ನಡ ಟೀಮ್:

ದೇವಾಲಯದ ಒಳಗೆ ಅಡಗಿ ಕೂತಿರುವ ಏ… ಮಹೇಶ ಹೊರಗೆ ಬಾರೋ. ಇದು ತಾಯಿ ಚಾಮುಂಡೇಶ್ವರ ಸಮನ್ನಿಧಿಯಲ್ಲಿ ಪ್ರಮಾಣದ ಸಮರಕ್ಕೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಪಂಥಾಹ್ವಾನಕ್ಕೆ ಕರೆದ ಪರಿ.

ವಿಶ್ವನಾಥ್ ಅವರು 25 ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪದ ವಿಚಾರವಾಗಿ ಈ ಇಬ್ಬರು ನಾಯಕರುಗಳ ನಡುವಣ ವಾಕ್ಸಮರ ಎಲ್ಲೆ ಮೀರಿತ್ತು. ನಂತರ ಅದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಪ್ರಮಾಣ ಮಾಡುವ ಹಂತಕ್ಕೆ ಬಂದು ನಿಂತಿತು. ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ಮಾಡಲು ಇಬ್ಬರ ನಾಯಕರ ನಡುವೆ ಸವಾಲು ಏರ್ಪಟ್ಟಿತ್ತು. ಈ ವೇಳೆ ದೇವಾಲಯದ ಒಳಗಿದ್ದ ಸಾರಾ ಮಹೇಶ್ ಅವರು ಹೊರಬಾರದ ಕಾರಣ ವಿಶ್ವನಾಥ್ ಮಹಾಭಾರತದಲ್ಲಿ ಭೀಮಾ, ವೈಷಂಪಾಯನ ಸರೋವರದಲ್ಲಿ ಅಡಗಿ ಕೂತಿದ್ದ ದುರ್ಯೋಧನನನ್ನು ಹೊರಗೆ ಕರೆದ ಪ್ರಸಂಗ ನೆನಪಿಸುವಂತೆ ಸವಾಲು ಹಾಕಿದರು.

‘ಸಾರಾ ಮಹೇಶ್ ಪಲಾಯನವಾದಿ. ಅವನು ಹೇಳಿದಂತೆ 8.50ಕ್ಕೆ ದೇವಾಲಯಕ್ಕೆ ಬಂದು ದೇವಿ ದರ್ಶನ ಮಾಡಿ 9 ಗಂಟೆಯಿಂದ ಕಾಯುತ್ತಿದ್ದೇನೆ. ಆದರೂ ದೇವಾಲಯದಲ್ಲೇ ಏಕೆ ಅಡಗಿ ಕೂತಿದ್ದಾರೆ. ಹೊರಗೆ ಬಾ ಎಂದು ಕರೆದರೂ ಬರುತಿಲ್ಲ. ಅವರು ಹೊರಗೆ ಬಾರದೆ ಇರುವುದು ನಾನು 25 ಕೋಟಿ ಹಣ ಪಡೆದಿದ್ದೇನೆ ಎಂಬ ಆರೋಪ ಸುಳ್ಳು ಎಂಬುದು ಸ್ಪಷ್ಟವಾಗಿದೆ. ನಾನು ಹಣ ಪಡೆದಿರುವುದು ನಿಜವೇ ಆಗಿದ್ದರೆ ಅದನ್ನು ಸಾಬೀತುಪಡಿಸಲಿ. ನಾನು ಭ್ರಷ್ಟಾಚಾರ ಮಾಡಿಲ್ಲಯ ಯಾರಾ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದು ಸಾಬೀತಾಗುತ್ತದೆ’ ಎಂದು ವಿಶ್ವನಾಥ್ ತಿಳಿಸಿದರು.

Leave a Reply