ಪಿಒಕೆಯಲ್ಲಿ 50 ಉಗ್ರರ ಸಂಹಾರ ಮಾಡಿದ ಭಾರತೀಯ ಸೈನಿಕರು!

ಡಿಜಿಟಲ್ ಕನ್ನಡ ಟೀಮ್:

ಪಾಕ್ ಆಕ್ರಮಿತ ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆಯುತ್ತೇವೆ ಎಂಬ ಕೇಂದ್ರ ನಾಯಕರ ಮಾತುಗಳ ಮಧ್ಯೆ, ಭಾರತೀಯ ಸೇನೆ ಪಿಒಕೆಯಲ್ಲಿ ನುಗ್ಗಿ ದಾಳಿ ನಡೆಸುತ್ತಿರೋದು ಗಡಿಯಲ್ಲಿ ಅಘೋಷಿತ ಯುದ್ಧ ವಾತಾವರಣ ನಿರ್ಮಾಣವಾಗಿದೆ.

ನಿನ್ನೆ ಪಿಒಕೆಯಲ್ಲಿ ನುಗ್ಗಿ 5 ಪಾಕ್ ಸೈನಿಕರನ್ನು ಹೊಡೆದುಹಾಕಿ ಉಗ್ರರ ಶಿಬಿರ ಉದಾಯಿಸಿದ ಭಾರತೀಯ ಸೇನೆ ಇಂದು 7 ಉಗ್ರರ ಕ್ಯಾಂಪ್ ನಾಶಗೊಳಿಸಿದೆ. ವರದಿಗಳ ಪ್ರಕಾರ ಭಾರತೀಯ ಸೇನೆ ಬೊಫೋರ್ಸ್ ಗನ್ ಮೂಲಕ 3000 150ಎಂಎಂ ಶೆಲ್ ಹಾಕಲಾಗಿದೆ. ಈ ದಾಳಿಯಲ್ಲಿ 50 ಉಗ್ರರು ಸತ್ತಿದ್ದಾರೆ ಎಂದು ಹೇಳಲಾಗಿದೆ. ನಾಶವಾಗಿರೋ 7 ಉಗ್ರ ನೆಲೆಗಳ ಪೈಕಿ 2 ನೆಲೆಗಳು ಪಿಒಕೆ ಗಡಿಯ 30 ಕಿ.ಮೀ ದೂರದಲ್ಲಿತ್ತು.

ಭಾರತೀಯ ಸೇನೆ ದಾಳಿ ನಂತರ ಪಾಕಿಸ್ತಾನ ಸೇನಾ ಮುಖ್ಯಸ್ಥರು ಇಸ್ಲಾಮಾಬಾದ್ ನಲ್ಲಿ ತುರ್ತು ಸಭೆ ನಡೆಸುತ್ತಿದ್ದಾರೆ.

Leave a Reply