ದೀಪಾವಳಿಯ ದಿನದಂದು ಉಗ್ರ ಅಲ್-ಬಘ್ದಾದಿ ಸಂಹಾರ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಮಿಲಿಟರಿ ಸಿರಿಯಾ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ಇಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅಲ್-ಬಘ್ದಾದಿ ಹತ್ಯೆ ಮಾಡಲಾಗಿದೆ. ದೀಪಾವಳಿಯ ಹಬ್ಬದ ದಿನದಂದು ಉಗ್ರ ಸಂಘಟನೆಯ ಮುಖ್ಯಸ್ಥನ ಹತ್ಯೆ ವಿಶೇಷವಾಗಿದೆ.

ಅಮೆರಿಕ ಮಿಲಿಟರಿ ಮೂಲಗಳ ಪ್ರಕಾರ ಅಲ್-ಬಘ್ದಾದಿಯನ್ನು ಗಿರಿಯಾಗಿಸಿ ಅಮೆರಿಕ ಪಡೆಗಳು ಸಿರಿಯಾದಲ್ಲಿ ಕಾರ್ಯಾಚರಣೆ ನಡೆಸಿದ್ದು, ಉಗ್ರ ಸಂಘಟನೆ ಮುಖ್ಯಸ್ಥನ ಹತ್ಯೆ ಮಾಡಲಾಗಿದೆ ಎಂದು ವರದಿಗಳು ಬಂದಿವೆ.

ಅಲ್-ಬಘ್ದಾದಿ ಸಾವಿನ ವಿಚಾರ ಸಿರಿಯಾದಿಂದ ಬಂದಿರುವುದಾಗಿ ಇಬ್ಬರು ಇರಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‘ಇರಾನ್ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಅಲ್-ಬಘ್ದಾದಿ ಹಾಗೂ ಆತನ ಅಂಗರಕ್ಷಕ ಇದ್ಲಿಬ್ ಕೂಡ ಹತ್ಯೆಯಾಗಿದ್ದಾನೆ.

Leave a Reply