ಖ್ಯಾತ ಕವಿ ಕೆ.ಎಸ್.ನಿಸಾರ್ ಅಹಮದರಿಗೆ ‘ಕನ್ನಡ ರತ್ನ’ ಗರಿ!

ಡಿಜಿಟಲ್ ಕನ್ನಡ ಟೀಮ್:

ಖ್ಯಾತ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಕನ್ನಡ ರಾಜ್ಯೊತ್ಸವ ಪ್ರಯುಕ್ತ ನೀಡಲಾಗುವ ಈ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡದ ಮೇರುನಟ ಡಾ.ವಿಷ್ಣುವರ್ಧನ ಅವರ ನೆನಪಿನಲ್ಲಿ ಪ್ರತಿ ರಾಜ್ಯೋತ್ಸವದಂದು ಶ್ರೇಷ್ಠ ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿಯನ್ನು ಡಾ.ವಿಷ್ಣು ಸೇನಾ ಸಮಿತಿಯು ನೀಡುತ್ತಾ ಬಂದಿದೆ. ಅದರಂತೆ ಮೊದಲನೇ ಪ್ರಶಸ್ತಿ ಕರವೇಯ ಟಿ.ಎ.ನಾರಾಯಣಗೌಡರಿಗೆ, ಎರಡನೇ ಪ್ರಶಸ್ತಿ ಖ್ಯಾತ ಸಾಹಿತಿಗಳಾದ ರಾ.ನಂ.ಚಂದ್ರಶೇಖರ್ ಅವರಿಗೆ, ಮೂರನೇ ಸಾಲಿನ ಪ್ರಶಸ್ತಿಯನ್ನು ಕನ್ನಡಪರ ಹೋರಾಟಗಾರರಾದ ಶ್ರ.ದೇ.ಪಾರ್ಶ್ವನಾಥ್ ಅವರಿಗೆ,

ನಾಲ್ಕನೇ ಸಾಲಿನ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡರಿಗೆ ಮತ್ತು ಐದನೇ ಸಾಲಿನ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಶರಣು ಬಿ ಗದ್ದುಗೆ ಅವರಿಗೆ ನೀಡಿ ಗೌರವಿಸಲಾಗಿತ್ತು.

ಅದರಂತೆ ಆರನೇ ಸಾಲಿನ ಪ್ರಶಸ್ತಿಗೆ ನಿತ್ಯೋತ್ಸವ ಕವಿ ಶ್ರೀ ಕೆ.ಎಸ್.ನಿಸಾರ್ ಅಹಮದ್ ಅವರು ಭಾಜನರಾಗಿದ್ದಾರೆ. ಇಂದು ಸಕಲ ಗೌರವಾಧರಗಳೊಂದಿಗೆ ಕೆ.ಎಸ್ ನಿಸಾರ್ ಅಹಮದ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ತುಂಬು ಮನಸಿನಿಂದ ಒಪ್ಪಿಗೆ ನೀಡಿದ ಶ್ರೀಯುತರು, ‘ಡಾ.ವಿಷ್ಣುವರ್ಧನ್ ಅವರ ನೆನಪಿನ ಪ್ರಶಸ್ತಿಯನ್ನು ಸ್ವೀಕರಿಸಲು ಅತ್ಯಂತ ಹರ್ಷಪಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಶಸ್ತಿಯು ಫಲ, ಪುಷ್ಪ, ಸ್ಮರಣಿಕೆ ಜೊತೆಗೆ ರೂ.20000/- ನಗದನ್ನು ಒಳಗೊಂಡಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ತಿಳಿಸಿದ್ದಾರೆ.

Leave a Reply