ಚಂದನವನದಲ್ಲಿ ಜೂ. ಯಶ್ ಆಗಮನದ ಸಿಹಿ ಸುದ್ದಿ

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನ ಬೆಸ್ಟ್ ಕಪಲ್ ಎಂದೇ ಬಿಂಬಿತವಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ ಗಂಡು ಮಗು ಜನಿಸಿದೆ. ಆ ಮೂಲಕ ಜೂನಿಯರ್ ಯಶ್ ಆಗಮನವಾಗಿದೆ.

ಕಳೆದ ವರ್ಷ ತಮ್ಮ ಮೊದಲನೇ ಮಗು ಐರಾಗೆ ಜನ್ಮ ನೀಡಿದ್ದ ರಾಧಿಕಾ ಕೆಲವೇ ತಿಂಗಳ ನಂತರ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದರು. ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತವನ್ನು ಆಚರಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು.

ನಿನ್ನೆ ರಾತ್ರಿ ಆಸ್ಪತ್ರೆಗೆ ರಾಧಿಕಾ ಪಂಡಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ.

Leave a Reply