ಉಪ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್

????????????????????????????????????

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್, ಜೆಡಿಎಸ್ ಜೆಡಿಎಸ್ ತೊರೆದು ಅತಂತ್ರ ಸ್ಥಿತಿಯಲ್ಲಿರುವ ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಆದ್ರೆ ಇನ್ನೂ ಕೂಡ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಎಲ್ಲರ ವಾದ ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ನವೆಂಬರ್ 3ರ ತನಕ ಸುಪ್ರೀಂಕೋರ್ಟ್‌ಗೆ ದಸರಾ ರಜೆ ಇದ್ದು, ನವೆಂಬರ್ 4ರ ಬಳಿಕ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಆದ್ರೆ ಸುಪ್ರೀಂಕೋರ್ಟ್ ಫಲಿತಾಂಶ ಏನಾದರೂ ಬರಲಿ, ನಾವು ಚುನಾವಣೆಗೆ ಸಜ್ಜಾಗೋಣ ಎಂದು ನಿರ್ಧಾರ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಒಟ್ಟು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು, ಮೊದಲ ಪಟ್ಟಿಯಲ್ಲಿ 8 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದ ಪಟ್ಟಿಗೆ ಸೋನಿಯಾ ಗಾಂಧಿ ಸಹಿ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಜಾಸ್ತಿಯಾಗಿದ್ದು, 3 ಕ್ಷೇತ್ರಗಳಲ್ಲಿ ತಮ್ಮ ಶಿಷ್ಯರಿಗೆ ಟಿಕೆಟ್ ಕೊಡಿಸುವಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಸಕ್ಸಸ್ ಆಗಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಅನ್ನೋದನ್ನು ನೋಡೋದಾದ್ರೆ.

ಉಪಚುನಾವಣಾ ಕ್ಷೇತ್ರ ಅಭ್ಯರ್ಥಿ ಹೆಸರು

ಹುಣಸೂರು- ಹೆಚ್.ಪಿ ಮಂಜುನಾಥ್
ಹೊಸಕೋಟೆ- ಪದ್ಮಾವತಿ ಸುರೇಶ್
ಕೆ.ಆರ್ ಪುರಂ- ನಾರಾಯಣಸ್ವಾಮಿ (ಎಂಎಲ್‌ಸಿ)
ಯಲ್ಲಾಪುರ- ಭೀಮಾನಾಯ್ಕ
ಚಿಕ್ಕಬಳ್ಳಾಪುರ- ಎಂ ಆಂಜಿನಪ್ಪ
ಮಹಾಲಕ್ಷ್ಮಿ ಲೇಔಟ್- ಎಂ.ಶಿವರಾಜ್ (ಬಿಬಿಎಂಪಿ ಕಾರ್ಪೋರೇಟರ್)
ರಾಣೆಬೆನ್ನೂರು- ಕೆ.ಬಿ ಕೋಳಿವಾಡ
ಹಿರೇಕೆರೂರು- ಬಿ.ಹೆಚ್ ಬನ್ನಿಕೋಡ್

ಇನ್ನುಳಿದ 7 ಕ್ಷೇತ್ರಗಳ ಅಭ್ಯರ್ಥಿ ಯಾರು ಅನ್ನೋ ಪಟ್ಟಿಯನ್ನು ಎಐಸಿಸಿ ರಿಲೀಸ್ ಮಾಡಿಲ್ಲ. 7 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೆಲವೊಂದಿಷ್ಟು ಗೊಂದಗಳಲಿದ್ದು, ಆ ಗೊಂದಲಗಳು ನಿವಾರಣೆಯಾದ ಬಳಿಕ ರಿಲೀಸ್ ಮಾಡಲು ನಿರ್ಧಾರ ಮಾಡಿದೆ.

ಆದ್ರೆ ಈಗ ರಿಲೀಸ್ ಆಗಿರುವ ಪಟ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲುಗೈ ಸಾಧಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅದರಲ್ಲೂ ಈ ಬಾರಿ ಸಿದ್ದರಾಮಯ್ಯ ತನ್ನ ಜಾತಿಗೆ ಮಣೆ ಹಾಕಿರೋದು ಸ್ಪಷ್ಟವಾಗಿದೆ. ಮೂವರು ಶಿಷ್ಯರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿರುವ ಸಿದ್ದರಾಮಯ್ಯ, ಯಾರು ಏನೇ ಆರೋಪ ಮಾಡಿಕೊಂಡರೂ ಹೈಕಮಾಂಡ್ ಮಟ್ಟದಲ್ಲಿ ನಾನಿನ್ನೂ ಪ್ರಭಾವಿ ಎಂಬುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ. ಯಾರಿಗೆಲ್ಲಾ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದಾರೆ ಅನ್ನೋದನ್ನು ನೋಡೋದಾದ್ರೆ ಹೊಸಕೋಟೆ ಕ್ಷೇತ್ರದಿಂದ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್, ಮಹಾಲಕ್ಷ್ಮಿ ಲೇಔಟ್‌ನಿಂದ ಎಂ. ಶಿವರಾಜುಗೆ ಟಿಕೆಟ್ ಕೊಡಿಸಿದ್ದಾರೆ. ಇನ್ನು ಹುಣಸೂರು ಕ್ಷೇತತ್ರದಿಂದ ಶಿಷ್ಯ ಮಂಜುನಾಥ್‌ಗೆ ಟಿಕೆಟ್ ಕೊಡಿಸುವಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಸಫಲರಾಗಿದ್ದಾರೆ.

Leave a Reply