ನಾಡಧ್ವಜ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಗೊಂದಲದ ನಡೆ?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಏಕೀಕರಣವಾದ ಇಂದು 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ರಾಜ್ಯ ಸರ್ಕಾರದ ವತಿಯಿಂದಲೂ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಆದರೆ ಈ ಬಾರಿ ರಾಜ್ಯದ ಬಾವುಟ ಹಾರಿಸಬಾರದು ಎಂದು ಮುಖ್ಯಮಂತ್ರಿ ಆದೇಶ ಹೊರಡಿಸಿ ನಂತರ ಮತ್ತೆ ಧ್ವಜ ಹಾರಿಸಿದ್ದಾರೆ. ಇದರೊಂದಿಗೆ ಸಿಎಂ ಯಡಿಯೂರಪ್ಪ ರಾಜ್ಯ ಧ್ವಜ ವಿಚಾರದಲ್ಲಿ ಗೊಂದಲದ ನಿಲುವು ತಾಳಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳ ಮೇಳ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಧ್ವಜ ಬದಲಿಗೆ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ.

ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಿಎಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭಕ್ಕೂ ಮೊದಲು ಪ್ರಶಸ್ತಿ ವಿಜೇತರಿಗಾಗಿ ಸಿಎಂ ಸಂತೋಷ ಕೂಟ ಏರ್ಪಾಡು ಮಾಡಿದ್ದು, ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್​ನಲ್ಲಿ ಸಂತೋಷ ಕೂಟ ನಡೆಯಲಿದೆ. ಇದಲ್ಲದೆ ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಸಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ಮಾಡಬೇಕು. ಆದ್ರೆ ಕನ್ನಡ ಬಾವುಟ ಹಾರಿಸುವಂತಿಲ್ಲ. ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಮೌಕಿಕ ಆದೇಶ ಹೊರಡಿಸಿದೆ. ಇದೇ ಕಾರಣಕ್ಕೆ ಕೊಪ್ಪಳ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದು, ಕನ್ನಡ ರಾಜ್ಯೋತ್ಸವದಂದು ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾರಿಸಬೇಕು ಬಳಿಕ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಬೇಕು ಎಂದು ಸೂಚಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಬಳಿಕ ಪ್ರತಿಯೊಬ್ಬ ಕನ್ನಡಿಗರೂ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಕನ್ನಡ ಹಬ್ಬದಂದು ಸರ್ಕಾರ ರಾಷ್ಟ್ರಧ್ವಜ ಹಾರಿಸಲು ಅಧಿಸೂಚನೆ ಹೊರಡಿಸಿದೆ, ಕನ್ನಡಿಗರ ಆಸ್ಮಿತೆ ಕನ್ನಡ, ಕನ್ನಡ ಧ್ವಜ ಹಾರಿಸುವ ಬಗ್ಗೆ ಯಾಕೆ ಏನನ್ನೂ ಹೇಳಿಲ್ಲ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನೆ ಮಾಡಲು ಶುರು ಮಾಡಿದ್ರು. ಆ ಬಳಿಕ ಇಂದು ಬೆಳೆಗ್ಗೆ ಯಡಿಯೂರಪ್ಪ ರಾಷ್ಟ್ರಧ್ವಜ ಹಾರಿಸಿದ ಬಳಿಕ ನಾಡಧ್ವಜವನ್ನೂ ಹಾರಿಸುವ ಮೂಲಕ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ರು.

ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರಧ್ವಜದ ಬಳಿಕ ನಾಡಧ್ವಜವನ್ನು ಹಾರಿಸಿದ್ದೇವೆ. ಯಾವುದೇ ಗೊಂದಲವಿಲ್ಲ ಎಂದು ಸಿಎಂ ಯಡಿಯೂರಪ್ಪ ಹಾಗು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಗೊಂದಲ ಉಂಟು ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಆದ್ರೆ ಸರ್ಕಾರಕ್ಕೆ ಎದುರಾದ ಟೀಕೆಯನ್ನು ಸಹಿಸಿಕೊಳ್ಳಲಾಗದ ಸರ್ಕಾರ ಸಣ್ಣ ಅಧಿಕಾರಿಯನ್ನು ಗುರಿ ಮಾಡುವ ಮೂಲಕ ಎಸ್ಕೇಪ್ ಆಗಲು ಯತ್ನಿಸಿದೆ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗ್ತಿದೆ. ಯಾಕಂದ್ರೆ ಕೊಪ್ಪಳ ಡಿಸಿ ಕಾರ್ಯಾಲಯ ಸೂಚನೆ ಮೇರೆಗೆ ನಾನು ಆದೇಶ ಮಾಡುತಿದ್ದೇನೆ ಎಂದು‌ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಆದೇಶ ಮಾಡಿದ್ದಾರೆ.

ಆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪ ನಿರ್ದೇಶಕರ ಆದೇಶದ ಮೇರೆಗೆ ಅದೇ ಆದೇಶ ಶಾಲೆಗಳಿಗೆ ರವಾನೆಯಾಗಿದೆ. ಹೀಗಿದ್ದರೂ ಕೇವಲ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಎಷ್ಟು ಸರಿ. ಸರ್ಕಾರದ ಸೂಚನೆ ಇಲ್ಲದೆ ಜಿಲ್ಲಾಧಿಕಾರಿಗಳು ಆ ರೀತಿ ಕರ್ತವ್ಯ ನಿರತವಹಿಸಿದ್ದರೆ ಅದು ಅಪರಾಧವಲ್ಲವೇ..? ಒಂದು ವೇಳೆ ಸರ್ಕಾರ ಮೌಕಿಕ ಆದೇಶ ನೀಡಿ, ಇದೀಗ ತಪ್ಪಿಸಿಕೊಳ್ಳಲು ಓರ್ವ ಮಹಿಳಾ ಅಧಿಕಾರಿಯನ್ನು ಅಡ್ಡ ಎಳೆದು ತಂದಿದ್ದು ಅವಮಾನಕರ ವಿಚಾರವೇ ಸರಿ. ನಿಮಗೆ ಅಷ್ಟೊಂದು ಕಾಳಜಿ ಇದ್ದರೆ ಸಾಕಷ್ಟು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜ ಹಾರಿಸಿಲ್ಲ. ನಿಮ್ಮ ಆದೇಶವನ್ನೇ ಪಾಲಿಸಿದ್ದಾರೆ‌ ಅವರು ವಿರುದ್ಧ ಕ್ರಮ ಕೈಗೊಳ್ಳಿ. ಜೊತೆ ಸಚಿವರಾದ ಸಿಟಿ ರವಿ ಕೂಡ ಕೇವಲ ರಾಷ್ಟ್ರಧ್ವಜ ಅಷ್ಟೇ ಹಾರಿಸಿಕೊಂಡು ಬಂದಿದ್ದೇವೆ.

ಈ ಬಾರಿ ಕೂಡ ಕೇವಲ ರಾಷ್ಟ್ರಧ್ವಜ ಹಾರಿಸಿದ್ದೇನೆ ಎಂದು ನೇರವಾಗಿಯೇ ಹೇಳಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ನಾಡಹಬ್ಬದ ವಿಚಾರದಲ್ಲಿ ನವರಂಗಿ ಆಟ ಆಡಿಬಿಡ್ತಾ ಅನ್ನೋ ದಟ್ಟವಾದ ಅನುಮಾನ ಕನ್ನಡಿಗರ ಮನೆ ಮನೆಗಳಲ್ಲಿ ಮನೆ ಮಾಡಿದೆ.

Leave a Reply