ಆಡಿಯೋ ಸಾಕ್ಷಿಯಾಗಿ ಪರಿಗಣನೆಗೆ ಸುಪ್ರೀಂ ನಿರ್ಧಾರ! ಅನರ್ಹರಿಗೆ ಹೆಚ್ಚಿದ ದಿಗಿಲು

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನುಮತಿ ಮೇರೆಗೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಆಡಿಯೋ ಅನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ರಮಣ ಅವರ ನೇತೃತ್ವದ ಪೀಠ, ಈ ಪ್ರಕರಣದಲ್ಲಿ ಆಡಿಯೋ ಅನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ತಿಳಿಸಿದೆ.

ಆಪರೇಷನ್ ಕಮಲದ ಮೂಲಕ ಒಡ್ಡಲಾದ ಆಮಿಷಕ್ಕೆ ಈ 17 ಅನರ್ಹ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ. ಪ್ರಕರಣದ ವಿಚಾರಣೆ ಮುಗಿದಿದ್ದು, ನಂತರ ಈ ಆಡಿಯೋ ಬಿಡುಗಡೆ ಆಗಿದೆ ಹೀಗಾಗಿ ಇದನ್ನು ಸಾಕ್ಷಿ ಆಗಿ ಪರಿಗಣಿಸಬೇಕು ಎಂದು ನಿನ್ನೆ ಕಪಿಲ್ ಸಿಬಲ್ ವಾದ ಮಂಡಿಸಿದರು.

ಈ ವಾದ ಪುರಸ್ಕರಿಸಿದ ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸಲು ತೀರ್ಮಾನಿಸಿದೆ. ಸುಪ್ರೀಂಕೋರ್ಟ್ ಈ ನಡೆ ಕಾಂಗ್ರೆಸ್ ಪಾಲಿಗೆ ಮುನ್ನಡೆ ತಂದುಕೊಟ್ಟಿದ್ದು, ತಮ್ಮ ಅನರ್ಹತೆ ಪ್ರಕರಣ ಏನಾಗುತ್ತದೋ ಎಂಬ ಆತಂಕದಲ್ಲಿರುವ ಶಾಸಕರಲ್ಲಿ ದಿಗಿಲು ಹೆಚ್ಚಿಸಿದೆ.

Leave a Reply