ಡಿಜಿಟಲ್ ಕನ್ನಡ ಟೀಮ್:
ಬಾಬರಿ ಮಸೀದಿ ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ, ಅದು ಐತಿಹಾಸಿಕ ಜಾಗದ ಮೇಲೆ ಕಟ್ಟಲಾಗಿದೆ ಎಂಬ ಅಂಶವನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿವಾದಿತ 2.7 ಎಕರೆ ಜಮೀನನ್ನು ರಾಮಲಲ್ಲಾಗೆ ನೀಡಿದ್ದು, ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ 5 ಎಕರೆ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇನ್ನು ನಿರ್ಮೋಹಿ ಅಖಾಡದ ವಾದವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುದೀರ್ಘ 40 ದಿನಗಳ ನಿರಂತರ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದ್ದು, ಇದರೊಂದಿಗೆ 2010ರಲ್ಲಿ ಅಲಹಬಾದ್ ಹೈಕೋರ್ಟ್ ವಿವಾದಿತ ಭೂಮಿಯನ್ನು ಮೂರು ಅರ್ಜಿದಾರರಿಗೆ ಸಮಾನವಾಗಿ ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ಬದಲಿಸಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎಲ್ಲ ಧರ್ಮದ ಭಾವನೆ ಗೌರವಿಸುತ್ತೇವೆ ಎಂದು ಸ್ಪಷ್ಟವಾಗಿದ್ದು, ಅಯೋಧ್ಯೆ ವಿವಾದಿತ ಜಮೀನು ಮುಸಲ್ಮಾನರಿಗೆ ಸೇರಿದ್ದಲ್ಲ ಎಂದು ತೀರ್ಮಾನಕ್ಕೆ ಬಂದರೂ ಅವರಿಗೆ 5 ಎಕರೆ ಪರ್ಯಾಯ ಜನರು ನೀಡಲು ಆದೇಶ ನೀಡಿದೆ. ಇದರೊಂದಿಗೆ ಧಾರ್ಮಿಕ ಭಾವನೆಯ ವಿವಾದಕ್ಕೆ ತೆರೆ ಎಳೆದಿದೆ. ಇದೇ ವೇಳೆ ಮೂರು ತಿಂಗಳಲ್ಲಿ ಟ್ರಸ್ಟ್ ಅನ್ನು ನೇಮಿಸಿ ರಾಮಮಂದಿರ ವಿಚಾರವಾಗಿ ಅಂತಿಮ ರೂಪುರೇಷೆ ಸಲ್ಲಿಸಬೇಕು ಎಂದು ಹೇಳಿದೆ. ಅದರೊಂದಿಗೆ ಈ ವಿವಾದಿತ ಭೂಮಿಯ ಮೇಲೆ ಯಾವುದೇ ಅರ್ಜಿದಾರರಿಗೆ ಹಕ್ಕು ನೀಡದೇ ಮುಂದೆ ರಚನೆಯಾಗಲಿರುವ ಟ್ರಸ್ಟ್ ಗೆ ನೀಡಲಾಗಿದೆ.
ತೀರ್ಪಿನಲ್ಲಿ ಏನಿದೆ?
ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂಬ ವಾಕ್ಕೆ ಮನ್ನಣೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತ ತತ್ವದಡಿಯಲ್ಲಿ. ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ. ಅದರ ಜತೆಗೆ ನಿರ್ಮೋಹಿ ಅಖಾಡ ಮತ್ತು ಶೀಯಾ ವಕ್ಫ್ ಬೋರ್ಡ್ ಸಲ್ಲಿಸಿದ್ದ ಹಕ್ಕುದಾರಿಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಫೈಜಾಬಾದ್ ಕೋರ್ಟ್ ಅರ್ಜಿಯನ್ನೂ ನ್ಯಾಯಮೂರ್ತಿಗಳು ವಜಾಗೊಳಿಸಿದರು.
ಮಸೀದಿಯಲ್ಲಿ ನಮಾಜ್ ಮಾಡುವ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ ಎಂದ ಸುಪ್ರೀಂ, ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು ಎಂದು ಅಭಿಪ್ರಾಯ ಪಟ್ಟಿತು. ಬಾಬರ್ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತದಡಿ ಸ್ಥಾಪನೆ ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ರಾಮ ಜನ್ಮ ಭೂಮಿ ನ್ಯಾಯಶಾಸ್ತ್ರವಾಗಿ ಇಲ್ಲ, ಹಾಗೇ ಬಾಬ್ರಿ ಮಸೀದಿಯೂ ಖಾಲಿ ಜಾಗದಲ್ಲಿ ಕಟ್ಟಿಲ್ಲ. ಅಲ್ಲಿ ಈ ಹಿಂದೆ ಯಾವುದೋ ಕಟ್ಟಡ ಇತ್ತು ಎನ್ನುವುದಕ್ಕೆ ಸಾಕ್ಷಿಯಿದೆ. ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟಡ ಎಂಬುದನ್ನು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. 12ನೇ ಶತಮಾನದ ಕಟ್ಟಡ ಆಗಿದ್ರೂ ಅದು ದೇಗುಲ ಎಂದು ಹೇಳಿಲ್ಲ. ಹಿಂದೂಗಳ ಪ್ರಕಾರ ಆ ಜಾಗ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು. ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಆಗಲ್ಲ.
ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಅನ್ನೋದು ವಾದ. ನಂಬಿಕೆ ಅನ್ನೋದು ಪಕ್ಕಾ ಎಂದಾಗ ಮಧ್ಯ ಪ್ರವೇಶ ಸರಿಯಲ್ಲ. ನಂಬಿಕೆಗಳನ್ನ ಕೋರ್ಟ್ ಒಪ್ಪಬೇಕಾಗುತ್ತೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲೀಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ . ಯಾರ ನಂಬಿಕೆಗಳನ್ನ ಕೋರ್ಟ್ ಪ್ರಶ್ನೆ ಮಾಡೋದಿಲ್ಲ ಎಂದ ಕೋರ್ಟ್ ಕೇವಲ ನಂಬಿಕೆ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದೂ.
ವಿವಾದಿತ ಭೂಮಿಯಲ್ಲಿ ಮುಸ್ಲೀಮರ ಸಂಪೂರ್ಣ ಹಕ್ಕು ಕಳೆದುಕೊಂಡಿಲ್ಲ. ಇದಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿಗಳು ಇಲ್ಲ . ಎರಡು ಅರ್ಜಿ ವಜಾಗೊಳಿಸಿ, ಎರಡನ್ನು ನ್ಯಾಯಪೀಠ ಪರಿಗಣಿಸಿತು.
1856 ರಿಂದ 1857ರ ಅವಧಿಯಲ್ಲಿ ನಮಾಜ್ ನಡೀತಿತ್ತು. ವಿವಾದಿತ ಜಾಗ ಸರ್ಕಾರದ ವಶ ಆಗೋವರೆಗೂ ಪ್ರಾರ್ಥನೆ. ಪ್ರಾರ್ಥನೆ ಮಾಡಿದ ಮಾತ್ರಕ್ಕೆ ಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿತು. ವಿವಾದಿತ ಜಾಗದಲ್ಲಿ ಹಿಂದೂಗಳಿಂದ ಪೂಜೆಯೂ ನಡೆಯುತ್ತಿತ್ತು. ಮುಸ್ಲೀಮರು ಅವಕಾಶ ಇಲ್ಲದಿದ್ದರೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದು ಸೌಹಾರ್ದತೆಯಿಂದ ನಡೆಯುತ್ತಿತ್ತು ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿತು.