ಹೊಸ ತಂತ್ರಜ್ಞಾನದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಟೆಕ್ ಗೀಕ್ ಗಾಡೆಸ್!

ಡಿಜಿಟಲ್ ಕನ್ನಡ ಟೀಮ್:

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ, ಆವಿಷ್ಕಾರ ನಿರಂತರ ಪ್ರಕ್ರಿಯೆ. ಹೀಗಾಗಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಆಗುತ್ತಲೇ ಇವೆ. ಈ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹಾಗೂ ಪ್ರೋತ್ಸಾಹ ಹೆಚ್ಚಿಸಲು ಟೆಕ್ ಗೀಕ್ ಸಂಸ್ಥೆ ಕೋಡಿಗ್ ವಿಚಾರವಾಗಿ ಟೆಕ್ ಗೀಕ್ ಗಾಡೆಸ್ 2019 ಸ್ಪರ್ಧೆ ನಡೆಸಿದೆ.

5ನೇ ಸಾಲಿನ ಸ್ಪರ್ಧೆಯಲ್ಲಿ ಒಟ್ಟು 73,388 ಉದಯೋನ್ಮುಖ ಮಹಿಳಾ ಟೆಕ್ಕಿಗಳು ಭಾಗವಹಿಸಿದ್ದು, ಅದರಲ್ಲಿ ತನ್ನೀರು ಲೀಲಾ ಪ್ರಶಸ್ತಿ ವಿಜೇತರಾಗಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಕೋಡಿಗ್ ಕೌಶಲ್ಯಕ್ಕೆ ಸಂಬಂಧಿಸಿದಂತೆ ನಡೆದ ಈ ಸ್ಪರ್ಧೆಯಲ್ಲಿ 73 ಸಾವಿರಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಲೀಲಾ ಪ್ರಶಸ್ತಿ ಗೆದ್ದರು.

ಇನ್ನು ನಾಲ್ಕು ಪರಿಕಲ್ಪನೆ ಮೇಲೆ ನಡೆದಿದ್ದು, ಆಟೊಮೇಷನ್ ಎನಿವೇರ್ ಹ್ಯಾಕಥಾನ್ ವಿಭಾಗದಲ್ಲಿ ಸಾರಿಕಾ ಪಾಟೀಲ್, ಮೃಣಾಲ್ ಕೊಟ್ಕರ್ ಪ್ರಶಸ್ತಿ ಪಡೆದರೆ, ಖತೀಜಾಬೀವಿ, ಸ್ವರ್ಣ ತ್ಯಾಗರಾಜನ್ ರನ್ನರ್ ಅಪ್ ಆದರು.

ಎಐ/ಎಂಐ ಹ್ಯಾಕಥಾನ್ ನಲ್ಲಿ ಲೈಷಾ ವಾಧ್ವಾ ಪ್ರಶಸ್ತಿ ಗೆದ್ದರೆ, ಜಯತಿಲಗ ರಾಮಜಯಂ ರನ್ನರ್ ಅಪ್ ಆದರು.

ಕ್ಲೌಡಿಫೈ ಎವೇರಿಥಿಂಗ್ ವಿಭಾಗದಲ್ಲಿ ಆರತಿ ಕುಮಾರ್, ನವ್ಯ ಸಿಂಗ್ ಮೊದಲ ಸ್ಥಾನ ಪಡೆದರೆ, ನಂದನಾ ದ್ವಿತೀಯ ಸ್ಥಾನ ಪಡೆದರು.

ಸೊಲ್ಯೂಷನ್ ಹಂಟರ್ ವಿಭಾಗದಲ್ಲಿ ನಿತ್ಯವಾಸುದೇವನ್ ಹಾಗೂ ರಾಜ್ರಿತಾ ದತ್ತಾ ಕ್ರಮವಾಗಿ ವಿನ್ನರ್ ಹಾಗೂ ರನ್ನರ್ ಅಪ್ ಆದರು.

ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ ಟೆಕ್ ಗೀಕ್ ಸಂಸ್ಥೆ ಟೈಮ್ಸ್ ಇಂಟರ್ನೆಟ್ ಟೆಕ್ನಾಲಜಿ ಉಪಾಧ್ಯಕ್ಷರಾದ ರಾಮ್ ಅವಸ್ತಿ, ‘ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಿ, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಿಸುವ ನಿಟ್ಟಿನಲ್ಲಿ ಮಹಿಳೆಯರ ಕೌಶಲ್ಯ ಅನಾವರಣಕ್ಕೆ ಈ ಸ್ಪರ್ಧೆ ನೆರವಾಗಲಿದೆ’ ಎಂದರು.

ಯುವ ಐಟಿ ಮಹಿಳಾ ವೃತ್ತಿಪರರು, ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಮುಖ ಕಂಪನಿಗಳಲ್ಲಿ ತಮ್ಮ ವೃತ್ತಿ ನಡೆಸಲು ನೆರವಾಗುತ್ತದೆ ಎಂದರು.

Leave a Reply