ಅಲ್ಲಿಯೂ ಇಲ್ಲ… ಇಲ್ಲಿಯೂ ಇಲ್ಲ ಎಂಬಂತಾಗಿದೆ ರೋಷನ್ ಬೇಗ್ ಪರಿಸ್ಥಿತಿ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ರೆಬಲ್ ಆಗಿ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಈಗ ಯಾವ ಪಕ್ಷಕ್ಕೂ ಬೇಡವಾದ ಪರಿಸ್ಥಿತಿಯಲ್ಲಿ ಇದ್ದಾರೆ.

ಆಪರೇಷನ್ ಕಮಲದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ರೋಷನ್ ಬೇಗ್, ಶಾಸಕರ ಸ್ಥಾನದಿಂದ ಅನರ್ಹರಾದ್ರು. ಇದಕ್ಕೂ ಮೊದಲೇ ಕಾಂಗ್ರೆಸ್ ವಿರುದ್ಧ ಬಂಡೆದ್ದಿದ್ದ ಬೇಗ್‌ರನ್ನು ಮೈತ್ರಿ ಪಕ್ಷದ ಸಿಎಂ ಆಗಿದ್ದ ಕುಮಾರಸ್ವಾಮಿ, ರೋಷನ್ ಬೇಗ್ ಜೊತೆ ಸಂಧಾನ ನಡೆಸಿದ್ರು. ಆದರೂ ಮುಂಬೈಗೆ ಎಸ್ಕೇಪ್ ಆಗುವ ವೇಳೆ ಐಎಂಎ ವಂಚನೆ ಪ್ರಕರಣದಲ್ಲಿ ಸಂಬಂಧವಿದೆ ಅನ್ನೋ ಆರೋಪದಲ್ಲಿ ಏರ್‌ಪೋರ್ಟ್‌ನಲ್ಲಿ ಬಂಧನಕ್ಕೂ ಒಳಗಾದ್ರು. ಜಾಮೀನು ಪಡೆದು ಹೊರಬಂದ ಬಳಿಕ ರಾಜೀನಾಮೆ ಸಲ್ಲಿಸಿ, ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಬಳಗ ಸೇರಿಕೊಂಡರು. ರೋಷನ್ ಬೇಗ್ ರಾಜೀನಾಮೆ ನೀಡಲು ಐಎಂಎ ಕೇಸ್ ಕಾರಣ. ಆ ಕೇಸ್‌ನಿಂದ ಹೊರಬರುವ ಉದ್ದೇಶದಿಂದಲೇ ಬಿಜೆಪಿ ಕಡೆಗೆ ವಾಲಿದ್ರು ಅನ್ನೋ ಆರೋಪಗಳೂ ಕೇಳಿಬಂದ್ವಿದ್ವು. ಇದೀಗ ಬಿಜೆಪಿಯಲ್ಲೂ ಇಲ್ಲ, ಕಾಂಗ್ರೆಸ್‌ನಲ್ಲೂ ಇಲ್ಲ ಎನ್ನುವಂತಾಗಿದೆ.

ಆರ್‌ಎಸ್ಎಸ್ ಕಾರ್ಯಕರ್ತನ ಕೊಲೆ ಕೇಸ್‌ನಲ್ಲಿ ರೋಷನ್ ಬೇಗ್ ವಿರುದ್ಧ ಆಕ್ರೋಶ ಹೊರಬಿದ್ದಿತ್ತು. ಆ ಬಳಿಕ ರೋಷನ್ ಬೇಗ್ ಸೇರ್ಪಡೆಗೆ ಆರ್‌ಎಸ್‌ಎಸ್ ಒಪ್ಪಿಗೆ ನೀಡದ ಕಾರಣ, ಬಿಜೆಪಿ ಸೇರ್ಪಡೆ ಸಾಧ್ಯವಾಗಿರಲಿಲ್ಲ. ಜೊತೆಗೆ ಬಿಜೆಪಿ ಟಿಕೆಟ್ ಸಹ ಸಿಕ್ಕಿರಲ್ಲ. ಇದೀಗ ಅತಂತ್ರವಾಗಿರುವ ರೋಷನ್ ಬೇಗ್, ಕಾಂಗ್ರೆಸ್‌ನಲ್ಲೂ ಟಿಕೆಟ್ ಕೇಳುವಂತಿಲ್ಲ, ಬಿಜೆಪಿಯಲ್ಲೂ ಟಿಕೆಟ್ ಸಿಗ್ತಿಲ್ಲ. ಮುಂದೇನು ಮಾಡೋದು ಎನ್ನುವ ವೇಳೆಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ಜೆಡಿಎಸ್‌ನಿಂದ ಟಿಕೆಟ್ ಪಡೆಯುವ ಕಸರತ್ತು ನಡೆಸಿದ್ದಾರೆ. ಆದ್ರೆ ಜೆಡಿಎಸ್ ನಾಯಕರ ಭೇಟಿಗೆ ಯತ್ನಿಸುತ್ತಿದ್ದು, ದೇವೇಗೌಡರು ಇನ್ನು ಭೇಟಿಗೆ ಅವಕಾಶ ನೀಡಿಲ್ಲ. ಈ ನಡುವೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ರೋಷನ್ ಬೇಗ್ ಪರವಾಗಿ ಅನುಕಂಪದ ಮಾತನಾಡಿದ್ದು, ರೋಷನ್ ಬೇಗ್ ಒಳ್ಳೆಯ ವ್ಯಕ್ತಿ, ಅವರು ಜೆಡಿಎಸ್‌ಗೆ ಬಂದರೆ ಸ್ವಾಗತಿಸ್ತೇನೆ. ಙ್ನ ಭೇಟಿಗೆ ಬಂದರೆ ಮಾತುಕತೆ ನಡೆಸಲು ನಾನು ಸಿದ್ಧ. ಮೈತ್ರಿ ಸರ್ಕಾರ ಬೀಳಿಸಲು ಸಂಚು ನಡೆಯುತ್ತಿದೆ‌ ಅನ್ನೋ ಸುದ್ದಿಯನ್ನು ವಾರಕ್ಕೆ ಮುಂಚೆಯೇ ನಮಗೆ ತಿಳಿಸಿದ್ರು. ದೇವೇಗೌಡರು ಸಿಎಂ ಆಗಿದ್ದಾಗ ಅವರು ಜನತಾ ಪರಿವಾರದ ನಾಯಕರಾಗಿದ್ದರು ಎನ್ನುವ ಮೂಲಕ ರೋಷನ್ ಬೇಗ್ ಕಣಕ್ಕೆ ಇಳಿಸುವ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ. ಆದ್ರೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶಿವಾಜಿನಗರ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗಿದ್ದು, ಪ್ರಚಾರ ಕೂಡ ಶುರು ಮಾಡಿದ್ದಾರೆ. ಈ ಹಂತದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ಕಡ್ಡಿ ತುಂಡಾದಂತೆ ಮಾತನಾಡಿದ್ದಾರೆ.

ಸಿಎಂ ಯಡಿಯೂರಪ್ಪ ಕೂಡ ರೋಷನ್ ಬೇಗ್ ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಅವರ ನಿರ್ಧಾರ ಅವರು ಕೈಗೊಳ್ಳುವ ಸ್ವಾತಂತ್ರ್ಯ ಅವರಿಗಿದೆ ಎಂದಿದ್ದಾರೆ. ಇದೀಗ ಸರವಣ ಅವರಿಗೆ ಟಿಕೆಟ್ ನೀಡಿದ್ದೇವೆ, ಬೆಂಬಲಿಸಿ ಎಂದು ಕೂಡ ಸೂಚನೆ ಕೊಟ್ಟಿದ್ದಾರೆ. ಆದ್ರೆ ಜೆಡಿಎಸ್‌ನಿಂದ ನಿಲ್ಲುವುದಾದರೆ ನಿಲ್ಲು ಎಂದಿದ್ದಾರಂತೆ ಸಿಎಂ ಯಡಿಯೂರಪ್ಪ, ಅದೇ ಕಾರಣಕ್ಕಾಗಿ ಜೆಡಿಎಸ್‌ನಿಂದ ಟಿಕೆಟ್ ಪಡೆದು ಗೆಲುವು ಸಾಧಿಸಲು ರೋಷನ್ ಬೇಗ್ ಪರದಾಡ್ತಿದ್ದಾರೆ. ಪಕ್ಷೇತರನಾಗಿ ಸ್ಪರ್ಧಿಸೋದಕ್ಕಿಂತ ಯಾವುದಾದರೂ ಪಕ್ಣದಿಂದ ಸ್ಪರ್ಧಿಸಿದ್ರೆ ಗೆಲುವು ಸರಳ ಅನ್ನೋ ಲೆಕ್ಕಾಚಾರ ಇದೆ. ಆರ್‌ಎಸ್‌ಎಸ್ ಒತ್ತಡಕ್ಕೆ ಮಣಿದು ಸರವಣಗೆ ಟಿಕೆಟ್ ಕೊಟ್ಟಿರುವ ಯಡಿಯೂರಪ್ಪ ಪರೋಕ್ಷವಾಗಿ ರೋಷನ್ ಬೇಗ್ ಬೆಂಬಲಿಸ್ತಾರೆ ಎನ್ನುವ ಮಾತುಗಳು ಕೇಳಿಸಿಕೊಂಡ ಬಳಿಕ ಜೆಡಿಎಸ್ ಯೂ ಟರ್ನ್ ಹೊಡೆದಿದ್ದು, ಈಗಾಗಲೇ ಟಿಕೆಟ್ ಘೋಷಣೆ ಮಾಡಿರುವ ಅಭ್ಯರ್ಥಿಯ ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಒಪ್ಪಿಸಿದ್ರೆ ಜೆಡಿಎಸ್‌ನಿಂದ ಟಿಕೆಟ್ ಕೊಡಲು ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಸಿಗ್ತಿದೆ. ಇದೇ ಕಾರಣಕ್ಕೆ ರೇವಣ್ಣನ ಭೇಟಿಗೆ ತೆರಳಿದ್ದು, ಶಿವಾಜಿನಗರ ಟಿಕೆಟ್ ಬದಲಾಗುವ ಸಾಧ್ಯತೆ ಇದೆ. ಒಟ್ಟಾರೆ ಕಾರಣಾಂತರಗಳಿಂದ ರಾಜೀನಾಮೆ ಕೊಟ್ಟ ಬೇಗ್ ಅಲ್ಲೂ ಇಲ್ಲ.. ಇಲ್ಲೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಮಾತ್ರ ಸತ್ಯ

Leave a Reply