ಹುಟ್ಟೂರು ಮಂಡ್ಯದಲ್ಲಿ ಸಿಎಂ ಮಗನ ಅಧಿಕೃತ ಎಂಟ್ರಿ..!?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡ್ಯ ರಾಜಕಾರಣದಲ್ಲಿ ನಿಯಂತ್ರಣ ಸಾಧಿಸಲು ಹಾಗೂ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಮಂಡ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ನಾಮಪತ್ರ ಸಲ್ಲಿಕೆ ವೇಳೆ ಬಿ.ವೈ ವಿಜಯೇಂದ್ರ ಉಸ್ತುವಾರಿ ವಹಿಸಿದ್ದಾರೆ. ಆ ಮೂಲಕ ಮಂಡ್ಯ ರಾಜಕಾರಣ ಬಿಎಸ್ ಯಡಿಯೂರಪ್ಪ ಪುತ್ರ ಎಂಟ್ರಿ ಪಡೆದಿದ್ದಾರೆ.

ನಾರಾಯಣ ಗೌಡ ಬದಲಿಗೆ ಈ ಬಾರಿ ಉಪ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡಬೇಕು ಅನ್ನೋ ಕೂಗು ಕೇಳಿಸಿತ್ತು. ಆದ್ರೆ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಅನರ್ಹ ಶಾಸಕರಿಗೆ ಟಿಕೆಟ್ ಕೊಡದೆ ಕುಟುಂಬಸ್ಥರಿಗೆ ಮಣೆ ಹಾಕಿದ್ರು ಅನ್ನೋ ವಿರೋಧ ಬರಬಾರದು ಅನ್ನೋ ಕಾರಣಕ್ಕೆ ಯಡಿಯೂರಪ್ಪ ತನ್ನ ನಿರ್ಧಾರಕ್ಕೆ ಕಟ್ಟು ಬಿದ್ದರು. ನಿಮಗೆ ವಿಜಯೇಂದ್ರ ಕೆ.ಆರ್ ಪೇಟೆಗೆ ಬೇಕು ಎಂದರೆ ನಾರಾಯಣ ಗೌಡರ ಗೆಲ್ಲಿಸಿಕೊಂಡು ಬನ್ನಿ‌ ಎಂದಿದ್ದಾರಂತೆ. ಇದಲ್ಲದೆ ಮತ್ತೊಂದು ಯೋಜನೆ ರೂಪುಗೊಂಡಿದೆ ಎನ್ನುವ ಮಾತು ಬಿಜೆಪಿ ವಲಯದಲ್ಲೇ ಕೇಳಿಸಿದ್ದು ವಿಶೇಷ.‌

ನಾರಾಯಣ ಗೌಡ ಈ ಬಾರಿ ಬಿಜೆಪಿಯಿಂದ ಗೆದ್ದು ಸಚಿವರಾದರೆ ಮುಂದಿನ ಬಾರಿ ಮತ್ತೆ ಟಿಕೆಟ್ ಕೇಳುವಂತಿಲ್ಲ. ಸಕ್ರಿಯ ರಾಜಕಾರಣದಲ್ಲಿ ಇದ್ದರೂ ವಿಜಯೇಂದ್ರಗೆ ಸ್ಥಾನ ಬಿಟ್ಟು ಕೊಡಬೇಕು. ಪರಿಷತ್, ಅಥವಾ ಸಂಸತ್‌ಗೆ ಆಯ್ಕೆ ಮಾಡಲಾಗುತ್ತೆ ಅನ್ನೋ ಮಾತು ನಡೆದಿದೆ ಎನ್ನಲಾಗ್ತಿದೆ. ಬಿಜೆಪಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಜನರೇ ಬಿಜೆಪಿ ಯೋಜನೆ ಬಗ್ಗೆ ಮೆಲುಕು ಹಾಕ್ತಿದ್ರು.

ಇನ್ನು ನಾರಾಯಣಗೌಡ ಗೆದ್ದರೆ ಮುಂದಿನ ಬಾರಿ ಕ್ಷೇತ್ರ ಬಿಟ್ಟುಕೊಡಬೇಕು, ಆದ್ರೆ ನಾರಾಯಣಗೌಡ ಈ ಬಾರಿ ಸೋತು ಮನೆ ಸೇರಿದ್ರೆ..!? ಕ್ಷೇತ್ರ ಬಿಟ್ಟುಕೊಡುವಂತೆಯೂ ಇಲ್ಲ, ಸಂಸದನಾಗಿ ಮಾಡುವ ಕಷ್ಟವೂ ಇರಲ್ಲ. ಮುಂದಿನ ಬಾರಿ ವಿಜಯೇಂದ್ರ ಸ್ಪರ್ಧೆ ಮಾಡುವುದು ಸುಲಭ.

Leave a Reply