ಶಿವಸೇನಾ ‘ಕೈ’ ಕೊಟ್ಟ ಎನ್ಸಿಪಿ! ಬಿಜೆಪಿ ‘ಮಹಾ’ ಮಾಸ್ಟರ್ ಸ್ಟ್ರೋಕ್!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಹಾಗೂ ಎನ್ಸಿಪಿಪಿ ಮೈತ್ರಿಯೊಂದಿಗೆ ಕಳೆದ ಒಂದು ತಿಂಗಳಿಂದ ಹಲವು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ಸರ್ಕಾರ ರಚನೆ ಇಂದು ಅಚ್ಚರಿ ರೀತಿಯಲ್ಲಿ ಅಂತ್ಯ ಕಂಡಿದೆ. ಅತಿ ಆಸೆಪಟ್ಟ ಶಿವಸೇನಾ ಬರಿಗೈಯಲ್ಲಿ ನಿಲ್ಲುವಂತಾಗಿದೆ.

ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನಾ ಮಹಾ ಮೈತ್ರಿಯೊಂದಿಗೆ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಕನಸು ಕಾಣುತ್ತಿದ್ದರು. ಈ ಮೈತ್ರಿಗೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ಸೂಚಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ 20 ವರ್ಷಗಳ ಬಳಿಕ ಶಿವಸೇನಾ ನಾಯಕ ಮುಖ್ಯಮಂತ್ರಿ ಆಗೋದು ಖಚಿತ ಎಂಬ ವಾತಾವರಣ ನಿರ್ಮಾಣವಾಯಿತು. ಆದರೆ ಇಂದು ಬೆಳಗ್ಗೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯು ಎನ್ಸಿಪಿ ಬೆಂಬಲ ಪಡೆದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ತಿಂಗಳು ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ, ಶಿವಸೇನಾಗೆ ಮುಖ್ಯಮಂತ್ರಿ ಪಟ್ಟ ಕೊಡುವುದಾಗಿ ಆಸೆ ತೋರಿಸಿ ದಾರಿ ತಪ್ಪಿಸಿದ ಎನ್ಸಿಪಿ ಇಂದು ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದೆ.

ಮಹಾರಾಷ್ಟ್ಟ್ರ್ರ್ಆಮಹಾರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಎನ್ಸಿಪಿ ಮೈತ್ರಿ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಯಾರೂ ಮಾಡಿರಲಿಲ್ಲ. ಯಾವುದೇ ಮಾಧ್ಯಮಗಳು ಕೂಡ ಈ ರಾಜಕೀಯ ಬೆಳವಣಿಗೆ ಊಹೆ ಮಾಡಲು ಸಾಧ್ಯವಾಗಲಿಲ್ಲ. ಇಷ್ಟು ಗೌಪ್ಯವಾಗಿ ತನಗೆ ಕೈ ಕೊಡಲು ಮುಂದಾದ ಶಿವಸೇನಾಗೆ ಮುಟ್ಟಿ ನೋಡುಕೊಳ್ಳುವಂತೆ ಬಿಸಿ ಮುಟ್ಟಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಮಹಾರಾಷ್ಟ್ರ ಸರ್ಕಾರ ರಚನೆ ಸಾಕ್ಷಿ.

Leave a Reply