ಫಡ್ನವೀಸ್ ರಾಜೀನಾಮೆ! ಉಲ್ಟಾ ಹೊಡೆದ ಚಾಣಾಕ್ಯ ಲೆಕ್ಕಾಚಾರ!

ಡಿಜಿಟಲ್ ಕನ್ನಡ ಟೀಮ್:

ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ರಚನೆ ಪ್ರಹಸನ ಇನ್ನೇನು ಮುಗಿಯಿತು ಅಂದುಕೊಳ್ಳುವಾಗಳೆಲ್ಲ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈಗ ಮೊನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

ಒಂದೆಡೆ ಎನ್ ಸಿಪಿ ನಾಯಕ ಶರದ್ ಪವಾರ್ ತಮ್ಮ ಶಾಸಕರ ಪಡೆಯನ್ನು ರೆಸಾರ್ಟ್ ನಲ್ಲಿ ಗುಡ್ಡೆ ಹಾಕಿಕೊಂಡು ಕಾಯುತ್ತಿರುವಾಗಲೇ ಸುಪ್ರೀಂಕೋರ್ಟ್ ನಾಳೆಯೇ ಸರ್ಕಾರ ಬಹುಮತ ಸಾಬೀತು ಪಡಿಸಲು ಆದೇಶಿಸಿತ್ತು.

ತಮ್ಮ ಪಕ್ಷದ ಶಾಸಕರು ಮರಳಿ ಶರದ್ ಪವಾರ್ ಜತೆ ಹೋದ ಕಾರಣ ಒತ್ತಡಕ್ಕೆ ಸಿಲುಕಿದ್ದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸುಪ್ರೀಂಕೋರ್ಟ್ ಆದೇಶದಿಂದ ಕಂಗಾಲಾದರು. ನಾಳೆ ಒಳಗೆ 50 ಶಾಸಕರನ್ನು ಎಲ್ಲಿಂದ ಸೆಳೆಯಬೇಕು ಎಂದು ತೋಚದಂತಾದರು.

ಮತ್ತೊಂದೆಡೆ ಎನ್ ಸಿಪಿ ನಾಯಕರು ಈಗಲೂ ಕಾಲ ಮಿಂಚಿಲ್ಲ ವಾಪಸ್ ಬನ್ನಿ ಎಂದು ಅಜಿತ್ ಗೆ ಅವಕಾಶ ನೀಡಿದರು. ಇದರ ಬೆನ್ನಲ್ಲೇ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಜಿತ್ ಪವಾರ್ ರಾಜೀನಾಮೆ ಬೆನ್ನಲ್ಲೇ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿ, ಎರಡು ದಿನಗಳ ಸರ್ಕಾರಕ್ಕೆ ಅಂತ್ಯ ಹಾಡಿದರು.

Leave a Reply