ಹುಬ್ಬಳ್ಳಿ ಹುಲಿಯಿಂದ ತೆಲಂಗಾಣ ರೇಪಿಸ್ಟ್‌ಗಳ ಬಲಿ..!

ಡಿಜಿಟಲ್ ಕನ್ನಡ ಟೀಮ್:

ದೆಹಲಿಯ ನಿರ್ಭಯಾ ಕೇಸ್ ಬಳಿಕ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು ಹೈದ್ರಾಬಾದ್‌ನ ಶಾದ್‌ನಗರದ ಸಾಮೂಹಿಕ ಅತ್ಯಾಚಾರ. ಪಶುವೈದ್ಯೆ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು ಕಾಮುಕರು, ಬೆಂಕಿಹಚ್ಚಿ ಕೊಲೆ ಮಾಡಿದ್ರು. ಆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ದೇಶಾದ್ಯಂತ ಆಕ್ರೋಶದ ಕೂಗು ಕೇಳಿ ಬಂದಿತ್ತು. ಸಂಸತ್ ಸದನಗಳಲ್ಲೂ ಹೈದ್ರಾಬಾದ್ ಗ್ಯಾಂಗ್ ರೇಪ್ ಸದ್ದು ಮಾಡಿತ್ತು. ನವೆಂಬರ್ 27ರ ರಾತ್ರಿ 9.30ಕ್ಕೆ ಪಶುವೈದ್ಯೆಯನ್ನು ಅಡ್ಡಗಟ್ಟಿದ ಕಾಮುಕರು, ಸಾಮೂಹಿಕ ಅತ್ಯಾಚಾರ ನಡೆಸಿ, ನಡುರಾತ್ರಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ರು. ಸರಿಯಾಗಿ ಒಂದು ವಾರದಲ್ಲಿ ಅದೇ ಸ್ಥಳದಲ್ಲಿ ಹೈದ್ರಾಬಾದ್ ಪೊಲೀಸ್ರು ಎನ್‌ಕೌಂಟರ್‌ನಲ್ಲಿ ನಾಲ್ವರನ್ನು ಬಲಿ ಪಡೆದಿದ್ದಾರೆ. ಅದೂ ಕೂಡ ನಮ್ಮ ಕರ್ನಾಟಕದ ಹುಬ್ಬಳ್ಳಿ ಮೂಲದ ಐಪಿಎಸ್ ಆಫೀಸರ್ ಅನ್ನೋದು ಹೆಮ್ಮೆಯ ವಿಚಾರ.

ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಿ ಅತ್ಯಾಚಾರ ನಡೆದ ಒಂದೇ ದಿನದಲ್ಲಿ ಎಲ್ಲಾ ಆರೋಪಿಗಳಿಗೂ ಕೋಳ ಹಾಕಿ ಕಟಕಟೆಗೆ ನಿಲ್ಲಿಸಲಾಗಿತ್ತು. ಆ ಬಳಿಕ ಕೋರ್ಟ್ ಎಲ್ಲಾ ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಘಟನೆ ಬಗ್ಗೆ ತನಿಖೆ ನಡೆಸುವ ಉದ್ದೇಶಗಳಿಗಾಗಿ ವಶಕ್ಕೆ ಕೊಡಬೇಕೆಂದು ಮನವಿ ಮಾಡಿಕೊಂಡು, ಗುರುವಾರ ರಾತ್ರಿ ಮಹಜರು ನಡೆಸಲು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅತ್ಯಾಚಾರ ಪ್ರಕರಣವನ್ನು ಮರುಸೃಷ್ಠಿ ಮಾಡುವಾಗ ಆರೋಪಿಗಳು ಕತ್ತಲ ರಾತ್ರಿಯಲ್ಲಿ ಕಣ್ಮರೆ ಆಗಲು ಯತ್ನ ನಡೆಸಿದ್ದಾರೆ. ಈ ವೇಳೆ ಪೊಲೀಸ್ರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಬಳಿಕ ರಾಜ್ಯ ಸರ್ಕಾರಕ್ಕೆ ಸುದ್ದಿ ರವಾನಿಸಿದ್ದಾರೆ.

ಆರೋಪಿಗಳ ಮೇಲೆ ಬೆಳಗ್ಗಿನ ಜಾವ 3.30ಕ್ಕೆ ನಾಲ್ವರು ಅತ್ಯಾಚಾರಿಗಳಾದ ಆರಿಫ್, ಶಿವ, ಚನ್ನಕೇಶವಲು, ನವೀನ್‌ ವಿಕೃತ ಸಂತೋಷಕ್ಕಾಗಿ ಸಾಮೂಹಿಕ ಅತ್ಯಾಚಾರ ನಡೆಸಿದವರು ಎನ್‌ಕೌಂಟರ್ನಲ್ಲಿ ಶವವಾಗಿದ್ದಾರೆ. ಚಟಾನ್‌ಪಲ್ಲಿ ಬ್ರಿಡ್ಜ್‌ ಮೇಲೆ ಆರೋಪಿಗಳ ಎನ್‌ಕೌಂಟರ್ ನಡೆದಿದೆ. ರಾತ್ರಿ ವೇಳೆ ಮಹಿಳೆಗೆ ಸಹಾಯ ಮಾಡುವುದಾಗಿ ನಂಬಿಸಿ, ನಂಬಿಕೆ ದ್ರೋಹ ಎಸಗಿ ಅತ್ಯಾಚಾರ ನಡೆಸಿದ್ದ ಈ ನಾಲ್ವರು ಕಾಮುಕರು ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ರು. ಇದೀಗ ಅದೇ ಸ್ಥಳದಲ್ಲಿ ನಾಲ್ವರು ಬೀದಿ ಹೆಣವಾಗಿದ್ದಾರೆ.

ಉತ್ತರ ಪ್ರದೇಶ ಹಾಗು ದೆಹಲಿ ಪೊಲೀಸರು ಹೈದ್ರಾಬಾದ್ ಪೊಲೀಸರ ಕೆಲವನ್ನು ನೋಡಿ ಕಲಿಯಲಿ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಆಗ್ರಹಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲಾ ಪಕ್ಷದವರು ಪಕ್ಷಾತೀತವಾಗಿ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದಾರೆ. ಇಷ್ಟೊಂದು ಶ್ಲಾಘನೀಯ ಕೆಲಸ ಮಾಡಿದ್ದು ನಮ್ಮ ಕರುನಾಡಿನ ಹುಬ್ಬಳ್ಳಿ ಹುಲಿ ವಿಶ್ವನಾಥ್ ಸಜ್ಜನರ್ ಅನ್ನೋದು ನಮ್ಮ ಹೆಮ್ಮೆ.

Leave a Reply