ಗೋಧ್ರಾ ಹತ್ಯಾಕಾಂಡ ಮರುಕಳಿಸುತ್ತೇ: ಸಿಟಿ ರವಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಹೆಚ್ಚಿನ ಜನರು ತಾಳ್ಮೆ ಕಳೆದುಕೊಂಡರೆ ಗೋಧ್ರಾ ಹತ್ಯಾಕಾಂಡ ಮತ್ತೆ ಮರುಕಳಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿಟಿ ರವಿ ಎಚ್ಚರಿಸಿದ್ದಾರೆ.

ನಿನ್ನೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಗುಂಡೇಟಿಗೆ ಬಲಿಯಾಗಿದ್ದು, ಇದಕ್ಕೆ ಮಾಜಿ ಸಚಿವ ಯು.ಟಿ ಖಾದರ್ ಅವರೇ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ಸಿಟಿ ರವಿ ಅವರು ಹೇಳಿದ್ದಿಷ್ಟು…

‘ಈ ಒಂದು ಮನೋಭಾವವೇ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ಕರಸೇವಕರನ್ನು ಕೊಲ್ಲುವಂತೆ ಮಾಡಿದ್ದು ಎಂಬುದು ನಮಗೆ ಗೊತಿದೆ. ನಂತರ ಏನೆಲ್ಲಾ ಆಯಿತು ಎಂಬುದನ್ನು ಯು.ಟಿ ಖಾದರ್ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಗೋಧ್ರಾ ರೈಲಿಗೆ ಬೆಂಕಿ ಹಾಕಿದ ನಂತರ ಜನ ಯಾವ ರೀತಿ ತಿರುಗಿ ಬಿದ್ದರು ಎಂಬುದನ್ನು ಅವರು ನೋಡಿದ್ದಾರೆ. ಅವರು ಅದನ್ನು ಮರೆತಿದ್ದರೆ ಈ ಸಂದರ್ಭದಲ್ಲಿ ಅದನ್ನು ನೆನಪಿಸಲು ಇಚ್ಛಿಸುತ್ತೇನೆ.’

‘ಬಹುಸಂಖ್ಯಾತರು ಶಾಂತಿ ಹಾಗೂ ತಾಳ್ಮೆಯಿಂದ ಇದ್ದಾರೆ. ಆದರೆ ನೀವು ಎಲ್ಲೆಡೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದೀರಿ. ನಮ್ಮ ತಾಳ್ಮೆ ಮಿತಿ ಮೀರಿದಾಗ ಏನಾಯ್ತು ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಿ. ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡಿ ಬೆಂಕಿ ಹಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ.’

Leave a Reply