ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಯಾಕಿಷ್ಟು ಗೊಂದಲ? ಪರಿಹಾರ ಏನು?

ಡಿಜಿಟಲ್ ಕನ್ನಡ ಟೀಮ್:

ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಭಾರತೀಯ ಮುಸಲ್ಮಾನರ ವಿರುದ್ಧ ಬಿಜೆಪಿ ಪ್ರಯೋಗಿಸುತ್ತಿರುವ ಪ್ರಬಲ ಅಸ್ತ್ರ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದರೆ, ಸಿಎಎಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ ಅಂತಾ ಕೇಂದ್ರ ಸರ್ಕಾರ ವಾದಿಸುತ್ತಿದೆ. ಈ ಎರಡು ವಾದಗಳಲ್ಲಿ ಸರಿ ಯಾವುದು? ಇದು ಸದ್ಯ ಬಹುತೇಕರಲ್ಲಿ ಉದ್ಭವಿಸಿರುವ ಗೊಂದಲ.

ಸಿಎಎ ಕಾಯ್ದೆ ಒಳಗೆ ಎನ್ಸಿಆರ್ ಸೇರ್ಪಡೆಯಾಗಿಲ್ಲ. ಹೀಗಾಗಿ ಈ ಕಾಯ್ದೆ ನೆರೆಯ ಮೂರು ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಈ ಕಾಯ್ದೆ ಜಾರಿಗೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಆದರೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಸ್ಸಾಂನಲ್ಲಿ ಪ್ರಾಯೋಗಿಕವಾಗಿ ಎನ್ಸಿಆರ್ ಮಾಡಿ ಲಕ್ಷಾಂತರ ಜನರನ್ನು ಅಕ್ರಮವಾಗಿ ನೆಲೆಸಿರುವವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರ ಕುಟುಂಬ ಸದಸ್ಯರು ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ದಾಖಲೆ ಇಲ್ಲದಿದ್ದರೆ ಮಾಜಿ ರಾಷ್ಟ್ರಪತಿಯ ಮನೆಯವರೇ ಭಾರತೀಯ ಮೂಲ ನಿವಾಸಿಗಳ ಪಟ್ಟಿಯಿಂದ ಹೊರಗುಳಿದಿರೋವಾಗ ಮಿಕ್ಕವರ ಕಥೆ ಏನು ಎಂಬ ಆತಂಕ ಮೂಡಿದೆ.

ಅಸ್ಸಾಂನಲ್ಲಿ ಎನ್.ಆರ್.ಸಿ ಜಾರಿ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ಜತೆಗೆ ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಆ್ಯಕ್ಟ್ ( CAA ) ಹಾಗು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್‌ಶಿಫ್ ( NRC ) ಕಾನೂನಿಂದ ಭಾರತೀಯ ಮುಸ್ಲಿಮರಿಗೆ ತೊಂದರೆ ಆಗುತ್ತಾ..? ಹಾಗಾದ್ರೆ ವ್ಯಕ್ತಿಯ ಪೌರತ್ವ ನಿರ್ಧರಿಸೋದು ಹೇಗೆ..? ಸರ್ಕಾರದ ಕೈಯಲ್ಲಿ ಪೌರತ್ವದ ಹಕ್ಕಿದೆಯೇ..? ಎಂದು ಪ್ರಶ್ನೆಗಳು ಉದ್ಭವಿಸುತ್ತಿವೆ.

ಆದ್ರೆ 2019ರಲ್ಲಿ ಜಾರಿಯಾದ ಪೌರತ್ವ ತಿದ್ದುಪಡಿ ಕಾಯ್ದೆ 1955ರ ನಿಯಮ ಅನುಸಾರವೇ ಪೌರತ್ವ ನಿರ್ಧಾರವಾಗಲಿದೆ ಎಂದಿದ್ದಾರೆ. ಇನ್ನು ಯಾವ್ಯಾವ ಅಂಶಗಳ ಆಧಾರದಲ್ಲಿ ಪೌರತ್ವ ನಿರ್ಧಾರವಾಗಲಿದೆ..? ಎಂಬುದನ್ನು ನೋಡುವುದಾದರೆ, ಪೌರತ್ವ ಕಾಯ್ದೆ ಒಟ್ಟು 5 ಅಂಶಗಳ ಆಧಾರದಲ್ಲಿ ನಿರ್ಧಾರವಾಗಲಿದ್ದು, 1. ಜನ್ಮಸ್ಥಳ ದಾಖಲೆ, 2. ಕುಟುಂಬದ ಮೂಲ
3. ನೋಂದಣಿ ದಾಖಲೆ, 4. ಸಹಜ ಕಾಲಾವಧಿ ವಾಸ
5. ಗಡಿಗಳ ಸಂಯೋಜನೆ ಆಧಾರದಲ್ಲಿ ನಿರ್ಧಾರ ಮಾಡಲಾಗುತ್ತದೆ.

NRC ಜಾರಿಯಾದಾಗ ಪೌರತ್ವ ಸಾಬೀತಿಗೆ ಪೋಷಕರ ಜನ್ಮ ದಾಖಲೆ ನೀಡಬೇಕಾ..? ಅನ್ನೋ ಅನುಮಾನಕ್ಕೆ ಉತ್ತರ ಕೊಟ್ಟಿರುವ ಕೇಂದ್ರ, ಪೌರತ್ವ ದೃಢೀಕರಿಸಲು ಜನನ ಪ್ರಮಾಣ ಪತ್ರ ಸಾಕು.
ದಾಖಲೆ ಇಲ್ಲದಿದ್ದರೆ ಪೋಷಕರ ಜನ್ಮ ದಿನಾಂಕ, ಸ್ಥಳದ ವಿವರ ಬೇಕು ಎಂದಿದೆ. ಆದ್ರೆ ತಂದೆ-ತಾಯಿಯ ಜನ್ಮ ದಾಖಲೆ ಬೇಕೇಬೇಕು ಅಂದೇನಿಲ್ಲ. ಜನನಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಇದ್ದರೂ ಸಾಕು. ವೋಟರ್ ಐಡಿ, ಪಾಸ್​ಪೋರ್ಟ್, ಆಧಾರ್ ಕಾರ್ಡ್, ಚಾಲನ ಪರವಾನಗಿ, ಶಾಲಾ ದಾಖಲೆ, ಮನೆ-ಜಮೀನು ದಾಖಲೆ ಕೊಡಬೇಕು.

NRC ಜಾರಿಯಾದ ಮೇಲೆ ಪೌರತ್ವ ಸಾಬೀತಿಗೆ
ಪೂರ್ವಜರ 1971ರ ಹಿಂದಿನ ದಾಖಲೆ ಒದಗಿಸಬೇಕಾ..? ಅನ್ನೋ ಅನುಮಾನ ಶುರುವಾಗಿದೆ. ಆದ್ರೆ 1971ಕ್ಕೂ ಹಿಂದಿನ ಪೂರ್ವಜರ ಬಗ್ಗೆ ದಾಖಲೆ ಬೇಕಿಲ್ಲ. ಈ ದಾಖಲೆ ಬೇಕಿರೋದು ಕೇವಲ ಅಸ್ಸಾಂ ರಾಜ್ಯದಲ್ಲಿ ಮಾತ್ರ ಅನ್ವಯವಾಗಲಿದೆ. ಇತರೆ ರಾಜ್ಯಗಳಲ್ಲಿ 2003ರ ಪೌರತ್ವ ಕಾನೂನಿನಡಿ ಚೀಟಿ
ರಾಷ್ಟ್ರೀಯ ಪೌರತ್ವ ಗುರುತಿನ ಚೀಟಿ ನೀಡಲಾಗುವುದು ಎಂದಿದೆ. ಒಬ್ಬ ವ್ಯಕ್ತಿ ಅವಿದ್ಯಾವಂತನಾಗಿದ್ದು, ಆತನ ಬಳಿ ದಾಖಲೆಗಳು ಇಲ್ಲದಿದ್ದಲ್ಲಿ ಏನು..? ಸರ್ಕಾರಿ ಅಧಿಕಾರಿಗಳು ಕಾಲಾವಕಾಶ ಕೊಡಲಿದ್ದು, ಗುರುತಿಗಾಗಿ ಸಾಕ್ಷಿ ಕರೆತರಲು ಅವಕಾಶ ನೀಡುತ್ತಾರೆ. ಇತರೆ ಗುರುತಿನ ಚೀಟಿ, ಸಮುದಾಯದ ಸಾಕ್ಷಿ ಒಳಗೊಂಡಿರುತ್ತೆ. ಯಾವುದೇ ಭಾರತೀಯನನ್ನು ಸಂಕಷ್ಟಕ್ಕೆ ದೂಡಲ್ಲ ಎಂಬ ಭರವಸೆ ಸಿಕ್ಕಿದೆ.

ಇನ್ನು ತೃತೀಯ ಲಿಂಗಿಗಳು, ನಾಸ್ತಿಕರು, ಆದಿವಾಸಿಗಳು, SC-ST, ಮಹಿಳೆಯರು, ಭೂ ಹೀನರು, ಜಮೀನು ದಾಖಲೆ ಇಲ್ಲದವರನ್ನು NRC ಅನ್ವಯ ದೇಶದಿಂದ ಹೊರಹಾಕಲಾಗುತ್ತಾ..? ಅವರ ಪಾಡೇನು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಯಾವ ವರ್ಗದ ಜನರಿಗೂ NRC ಅಡಿ ತೊಂದರೆ ನೀಡಲಾಗುವುದಿಲ್ಲ ಎನ್ನಲಾಗಿದೆ.

Leave a Reply