ಸಾಮ್ರಾಜ್ಯ ಮರುಸೃಷ್ಟಿ ಮಾಡ್ತಾನಂತೆ ರಾಕಿ ಭಾಯ್!

ಡಿಜಿಟಲ್ ಕನ್ನಡ ಟೀಮ್:

ಕಳೆದ ವರ್ಷ ಬೆಳ್ಳಿ ತೆರೆಗೆ ಸಿಡಿಲಿನಂತೆ ಅಪ್ಪಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದ ರಾಕಿ ಭಾಯ್, ಕೆಜಿಎಫ್ ಚಾಪ್ಟರ್ 2ರಲ್ಲಿ ಸಾಮ್ರಾಜ್ಯವನ್ನು ಮರು ಸೃಷ್ಟಿ ಮಾಡ್ತಾನೆ ಅಂತಾ ಚಿತ್ರ ತಂಡ ಬಿಡುಗಡೆ ಮಾಡಿರುವ ಮೊದಲ ಪೋಸ್ಟರ್ ಹೇಳುತ್ತಿದೆ.

ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2ರ ಚಿತ್ರದ ಮೊದಲ ಲುಕ್ ಅನ್ನು ಇಂದು ಬಿಡುಗಡೆಯಾಗಿದೆ.

ಕೆಜಿಎಫ್ ಚಾಪ್ಟರ್ 1ರಲ್ಲಿ ರಾಕಿ ಭಾಯ್ ಚಿನ್ನದ ಗಣಿ ಸಾಮ್ರಾಜ್ಯಕ್ಕೆ ಎಂಟ್ರಿ ಕೊಡೋದನ್ನು ತೋರಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್ ತಂಡ ಎರಡನೇ ಚಾಪ್ಟರ್ ನಲ್ಲಿ ರಾಕಿ ಭಾಯ್ ಅದೇ ಚಿನ್ನದ ಗಣಿಯಲ್ಲಿ ಸಾಮ್ರಾಜ್ಯವನ್ನೇ ಮರುಸೃಷ್ಟಿ ಮಾಡುವುದನ್ನು ತೋರಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಮೊದಲ ಚಿತ್ರದ ಭರ್ಜರಿ ಯಶಸ್ಸು ಎರಡನೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ದಿನೇ ದಿನೇ ಚಿತ್ರದ ಬಗೆಗಿನ ಕುತೂಹಲ ಮುಗಿಲೆತ್ತರಕ್ಕೆ ಬೆಳೆಯುತ್ತಿದೆ. ಅತ್ಯುತ್ತಮ ಕಥೆ, ಚಿತ್ರ ನಿರ್ಮಾಣ, ತಂತ್ರಜ್ಞರ ಕೆಲಸದ, ಖ್ಯಾತ ನಟರ ಜತೆ ಸಂಜಯ್ ದತ್ ಸೇರ್ಪಡೆ ಅಭಿಮಾನಿಗಳ ಗಮನ ಸೆಳೆದಿಟ್ಟಿದೆ.

Leave a Reply