ಸಿಎಂ ಯಡಿಯೂರಪ್ಪ ಕಾರಿಗೆ ಕೇರಳದ ಕಣ್ಣೂರಿನಲ್ಲಿ ಕಲ್ಲುತೂರಾಟ

ಡಿಜಿಟಲ್ ಕನ್ನಡ ಟೀಮ್:

ಕೇರಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕಾರಿನ ಮೇಲೆ ಕಣ್ಣೂರಿನಲ್ಲಿ ಕಲ್ಲು ತೂರಾಟ ನಡೆದಿದೆ.

ಕೇರಳದ ಕಣ್ಣೂರಿನ ಮಾಡಯಿಕಾವು ಭಗವತಿ ದೇವಸ್ಥಾನ, ಪರಶಿನಕಡಾವು ಮುತ್ತಪ್ಪನ್ ದೇವಸ್ಥಾನ, ತಲಿಪರಂಬ ರಾಜರಾಜೇಶ್ವರಿ ದೇವಸ್ಥಾನಗಳಿಗೆ ಇಂದು ಸಿಎಂ ಬಿಎಸ್ ವೈ ಭೇಟಿ ನೀಡಿದ್ದರು.

ಸಿಎಂ ಕಾರು ಕಣ್ಣೂರು ತಲುಪುವಾಗ ಡಿವೈಎಫ್ ಐ ಮತ್ತು ಸಿಪಿಐಎಂ ಕಾರ್ಯಕರ್ತರು ಮಂಗಳೂರು ಘಟನೆಯನ್ನು ನೆಪವಾಗಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಆ ನಡುವೆ ಒಬ್ಬ ಸಿಎಂ ಕಾರು ಹತ್ತಿರ ಬಂದು ಕಾರಿನ ಗಾಜಿಗೆ ಕಲ್ಲು ತೂರಾಟ ನಡೆಸಿದ್ದಾನೆ. ಈ ಘಟನೆಯಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತಿತ್ತು.

Leave a Reply