ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ನಯಾ ಪೈಸೆ ಪರಿಹಾರ ಕೊಡಲ್ಲ: ಸಿಎಂ

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಗುರುವಾರ ಮಂಗಳೂರಿನಲ್ಲಿ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ನಡೆದ ಗೋಲಿಬಾರ್ ನಲ್ಲಿ ಸತ್ತ ಇಬ್ಬರಿಗೆ ಸರ್ಕಾರದ ಕಡೆಯಿಂದ ಒಂದೇ ಒಂದು ರೂಪಾಯಿ ಪರಿಹಾರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದರೂ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಈ ವೇಳೆ ಉದ್ರಿಕ್ತರ ಗುಂಪು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದರು.

ಈ ಘಟನೆಯಲ್ಲಿ ಜಲೀಲ್ ಮತ್ತು ನೌಶಿನ್ ಎಂಬ ಇಬ್ಬರು ಯುವಕರು ಗುಂಡೇಟಿನಿಂದ ಸಾವನ್ನಪ್ಪಿದ್ದರು.

ಈ ನಡುವೆ ವಿಡಿಯೋದಲ್ಲಿ ಜನ ಪೊಲೀಸರೆಡೆಗೆ ಕಲ್ಲು ತೂರಾಟ ಮಾಡುವ ದೃಶ್ಯಗಳು ದಾಖಲಾಗಿದ್ದು, ಮೃತರಿಗೆ ಪರಿಹಾರ ನೀಡಿದರೆ ಅದು ನಮ್ಮ ಪೊಲೀಸ್ ಇಲಾಖೆಗೆ ಮಾಡುವ ಅವಮಾನ. ಇವರು ದೇಶಕ್ಕಾಗಿ ಪ್ರಾಣ ಬಿಟ್ಟಿಲ್ಲ. ಕಾನೂನು ಕೈಗೆತ್ತಿಕೊಂಡ ಪರಿಣಾಮ ಸತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು.

ಸದ್ಯ ಪ್ರಕರಣದ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿರುವ ಬಿ.ಎಸ್.​ ಯಡಿಯೂರಪ್ಪ ಈ ಕುರಿತು ಇಂದು ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ, “ಗೋಲಿಬಾರ್​ನಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಈವರೆಗೆ ಪರಿಹಾರದ ಹಣ ಘೋಷಣೆ ಮಾಡಿಲ್ಲ. ಅಲ್ಲದೆ, ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಮುಗಿಯುವವರೆಗೆ ಯಾರಿಗೂ ಪರಿಹಾರ ನೀಡಲಾಗುವುದಿಲ್ಲ. ಒಂದು ವೇಳೆ ತನಿಖೆಯಲ್ಲಿ ಮೃತಪಟ್ಟ ಇಬ್ಬರೂ ಯುವಕರು ಅಪರಾಧಿಗಳು ಎಂಬುದು ಸಾಭೀತಾದರೆ ಯಾರಿಗೂ 1 ರೂ. ಸಹ ಪರಿಹಾರ ನೀಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply