ಡಿಜಿಟಲ್ ಕನ್ನಡ ಟೀಮ್:
ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇದರೊಂದಿಗೆ ಗೋಮಾಂಸ ಸೇವನೆ ನಿಷೇಧ ಹೇರಿರುವ ಕೇಂದ್ರ ಸರ್ಕಾರ ಹಿಂದೂಗಳ ಮನ ಗೆಲ್ಲುವ ಪ್ರಯತ್ನ ಮಾಡಿದೆಯಾದರೂ ಗೋ ಹತ್ಯೆಗೆ ಸಂಪೂರ್ಣ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
2017-19ರ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ ಎರಡನೇ ಹಾಗೂ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.
ಅಮೆರಿಕದ ಕೃಷಿ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2017ರಲ್ಲಿ18 ಲಕ್ಷ ಮೆಟ್ರಿಕ್ ಟನ್, 2018ರಲ್ಲಿ 19 ಮೆಟ್ರಿಕ್ ಲಕ್ಷ ಟನ್ ಗೋಮಾಂಸವನ್ನುಭಾರತ ರಫ್ತು ಮಾಡಿದೆ. 2019ರಲ್ಲಿ ಇದು 16 ಲಕ್ಷ ಮೆಟ್ರಿಕ್ ಟನ್ಗೆ ಇಳಿಕೆ ಆಗಿದೆ. ಬ್ರೆಜಿಲ್ 2017ರಲ್ಲಿ 19 ಮೆಟ್ರಿಕ್ ಟನ್ ದನದ ಮಾಂಸ ರಫ್ತು ಮಾಡಿದ್ದರೆ, 2019ರಲ್ಲಿ ಈ ಪ್ರಮಾಣ 22 ಲಕ್ಷ ಮೆಟ್ರಿಕ್ ಟನ್ಗೆ ಏರಿಕೆ ಆಗಿದೆ.