1 ಲಕ್ಷ ಕೋಟಿ ಗಡಿ ದಾಟಿದ ಡಿಸೆಂಬರ್ ಜಿಎಸ್ಟಿ ಗಳಿಕೆ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಡಿಸೆಂಬರ್ ತಿಂಗಳ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮೂಲಕ 1 ಲಕ್ಷ ಕೋಟಿ ಆದಾಯ ಸಂಗ್ರಹವಾಗಿದ್ದು, 2018ರ ಡಿಸೆಂಬರ್ ಗೆ ಹೋಲಿಸಿದರೆ ಶೇ.16ರಷ್ಟು ಏರಿಕೆ ಕಂಡಿದೆ.

ಡಿಸೆಂಬರ್ ನಲ್ಲಿ 1.03 ಲಕ್ಷ ಕೋಟಿ ಆದಾಯ ಸಂಗ್ರಹವಾಗಿದ್ದು, 2017ರ ಜುಲೈನಲ್ಲಿ ಜಿಎಸ್ಟಿ ಜಾರಿಯಾದ ನಂತರ 9ನೇ ಬಾರಿಗೆ ತಿಂಗಳ ಗಳಿಕೆ 1 ಲಕ್ಷ ಕೋಟಿ ದಾಟಿದಂತಾಗಿದೆ. 1.03 ಲಕ್ಷ ಕೋಟಿಯಲ್ಲಿ ಸಿಜಿಎಸ್ಟಿ ಮೂಲಕ 19,962 ಕೋಟಿ ರೂ. ಸಂಗ್ರಹವಾದರೆ, ಎಸ್ ಜಿಎಸ್ಟಿ ಮೂಲಕ 26,792 ಕೋಟಿ ಹಾಗೂ ಐಜಿಎಸ್ಟಿ ಮೂಲಕ 48,099 ಕೋಟಿ ಸಂಗ್ರಹವಾಗಿದೆ.

Leave a Reply