2020ರ ಇಸ್ರೋದ ಮಹತ್ವದ ಯೋಜನೆಗಳೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

2019ರಲ್ಲಿ 13 ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020ರಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ತಮ್ಮ ಮುಂದೆ ಹೊಂದಿದೆ. ಅವುಗಳೆಂದರೆ…

  • ಬಹು ನಿರೀಕ್ಷಿತ ಮಾನವ ಸಹಿತ ಗಗನಯಾನ ಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ. ಈ ಗಗನಯಾನಿಗಳಿಗೆ ಇದೇ ತಿಂಗಳು ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ಆರಂಭವಾಗಲಿದೆ.
  • ಗಗನಯಾನದ ಭಾಗವಾಗಿ ಪ್ರಾಯೋಗಿಕ ಪರೀಕ್ಷಾ ಉಡಾವಣೆ ನಡೆಯಲಿದ್ದು ಹ್ಯೂಮನಾಯ್ಡ್ (ಮಾನವ ಮಾದರಿಯ ರೋಬೋಟ್) ಕಳುಹಿಸಲಾಗುವುದು .
  • ಇನ್ನು ಚಂದ್ರಯಾನ 3ಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಗೆ 14ರಿಂದ 16 ತಿಂಗಳ ಕಾಲಾವಧಿ ಅಗತ್ಯವಿದ್ದು, ಮುಂದಿನ ವರ್ಷ ಚಂದ್ರಯಾನ 3 ಉಡಾವಣೆಯಾಗಲಿದೆ.
  • ಚಂದ್ರಯಾನ 2 ಹಾಗೂ 3 ಯೋಜನೆಯಲ್ಲಿ ಸಾಮ್ಯತೆ ಇದೆ. ಚಂದ್ರಯಾನ 3ರಲ್ಲಿ ರೋವರ್ ಹಾಗೂ ಲ್ಯಾಂಡರ್ ಕಳುಹಿಸಲಾಗುವುದು. ಚಂದ್ರಯಾನ 2ರ ಆರ್ಬಿಟರ್ ಯಶಸ್ವಿ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಆರ್ಬಿಟರ್ ಗೆ ಲ್ಯಾಂಡರ್ ಸಂಪರ್ಕ ಕಲ್ಪಿಸಲಾಗುವುದು.
  • ಈ ವರ್ಷ ಜಿಸ್ಯಾಟ್ 1, ಮೈಕ್ರೊಸ್ಯಾಟ್ ಸೇರಿದಂತೆ 10ಕ್ಕೂ ಹೆಚ್ಚು ಉಪಗ್ರಹ ಉಡಾವಣೆ ಮಾಡುವ ಗುರಿ ಇದೆ.

Leave a Reply