ಸಿಎಎ ವಿರೋಧಿಸುವ ಬದಲು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

‘ಪಾಕಿಸ್ತಾನ ಧರ್ಮದ ಆಧಾರದ ಮೇಲೆ ರಚನೆಯಾಗಿರುವ ದೇಶ. ಹೀಗಾಗಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮಾತನಾಡುವುದಿಲ್ಲ. ಹೀಗಾಗಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುವ ಬದಲು, ಪಾಕಿಸ್ತಾನದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ…’ ಇದು ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ನಿಷೇಧ ಕಾಯ್ದೆಗೆ ವಿರೋಧಿಸಿದವರ ವಿರುದ್ಧ ಹರಿಹಾಯ್ದ ಪರಿ.

ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಮಠದಲ್ಲಿ ನಡೆದ ಸಮಾವೇಷದಲ್ಲಿ ಮಾತನಾಡಿದ ಮೋದಿ ಕನ್ನಡದಲ್ಲೇ ತಮ್ಮ ಮಾತು ಆರಂಭಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ನಾನು ತುಮಕೂರಿಗೆ ಆಗಮಿಸಿರುವುದು ಸಂತೋಷ ತಂದಿದೆ. ಸಿದ್ಧಗಂಗಾ ಶ್ರೀಗಳ ತವರಿಗೆ ಭೇಟಿ ನೀಡಿರುವುದಕ್ಕೆ ಸಂತಸವಿದೆ. ಈ ಪುಣ್ಯಭೂಮಿಗೆ ಬಂದು ಕೆಲಸ ಆರಂಭ ಮಾಡುತ್ತಿದ್ದೇನೆ. ಈ ವರ್ಷದ ಕೆಲಸ ಇಲ್ಲಿಂದ ಪ್ರಾರಂಭಿಸುತ್ತಿದ್ದೇನೆ. ಹಲವು ವರ್ಷಗಳ ಬಳಿಕ ಇಲ್ಲಿಗೆ ಬರುವ ಅವಕಾಶ ಸಿಕ್ಕಿದೆ. ಇಲ್ಲಿಗೆ ಬಂದಾಗ ಶೂನ್ಯ ಆವರಿಸುತ್ತಿದೆ.

ಇನ್ನು, ಶ್ರೀಗಳ ಭೌತಿಕ ಅನುಪಸ್ಥಿತಿಯಿಂದ ಶೂನ್ಯ ಆವರಿಸಿದೆ. ಶಿವಕುಮಾರ ಶ್ರೀಗಳ ದರ್ಶನದಿಂದ ಪುಣ್ಯ ಸಿಕ್ಕಿದೆ. ಸಮಾನತೆಯ ಸಮಾಜ ನಿರ್ಮಾಣಕ್ಕೆ ಯತ್ನಿಸಿದ ಶ್ರೀಗಳ ಸೇವೆಯೂ ಗಂಗೆಯಂತೆ ಹರಿಯುತ್ತಿದೆ. ಇಂತಹ ಶ್ರೀಗಳ ಆಶಯ ಈಡೇರಿಸಲಿದ್ದೇವೆ. ಶ್ರೀಗಳ ಮ್ಯೂಸಿಯಂಗೆ ನಾನು ಶಿಲಾನ್ಯಾಸ ಮಾಡಿಕೊಲಿದ್ದೇನೆ.

ಪೇಜಾವರ ಶ್ರೀಗಳ ನಿಧನದಿಂದ ಶೂನ್ಯ ಆವರಿಸಿದೆ. 21ನೇ ಶತಮಾನದ 3ನೇ ದಶಕದಲ್ಲಿದ್ದೇವೆ. ನವ ಭಾರತ ಹೊಸ ಉತ್ಸಾಹದಿಂದ ಸಾಗುತ್ತಿದೆ. ಇಡೀ ಭಾರತ ಹೊಸ ಆಕಾಂಕ್ಷೆಗಳಲ್ಲಿದೆ. ಯುವಕರು, ಬಡವರು, ದಲಿತರಲ್ಲಿ ಇಂತಹ ಆಕಾಂಕ್ಷೆ ಇದೆ. ಸವಾಲುಗಳ ನಡುವೆ ಆಕಾಂಕ್ಷೆ ಈಡೇರಿಕೆಗೆ ಯತ್ನಿಸುತ್ತೇನೆ. ಸಾಮಾಜಿಕ ಸುರಕ್ಷೆ ನೀಡಲು ನಮ್ಮ ಯತ್ನಿಸಲಿದ್ದೇವೆ.

ಸಿಎಎ ಹಾಗೂ ಎನ್ ಆರ್ ಸಿ ಐತಿಹಾಸಿಕ ನಿರ್ಣಯ. ಆದರೆ, ಕಾಂಗ್ರೆಸ್ ಕುತಂತ್ರದಿಂದ ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತ್ತಿದೆ. ಸಾವಿರಾರು ಅಲ್ಪ ಸಂಖ್ಯಾತರು ಅಲ್ಲಿಂದ ಭಾರತಕ್ಕೆ ಬರುವ ಅನಿವಾರ್ಯತೆ ಇದೆ. ಆದರೆ, ಕಾಂಗ್ರೆಸ್ಸಿಗರು ಪಾಕಿಸ್ತಾನದ ತಪ್ಪು ಬಗ್ಗೆ ಮಾತಾಡುತ್ತಿಲ್ಲ. ಪಾಕಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಬರ್ಬಾದ್ ಮಾಡಿದ್ದಾರೆ. ದಲಿತರು, ಬಡವರ ಮೇಲೆ ನಮ್ಮ ಜವಾಬ್ದಾರಿ ಇದೆ.

ಕಾಂಗ್ರೆಸ್ ನವರು ಆಂದೋಲನ ಮಾಡೋದಿದ್ದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ದ ಮಾಡಲಿ. ನಿಮಗೆ ಧಮ್ ಇದ್ದರೆ ಇಂದಿನಿಂದಲೇ ಆಂದೋಲನ ಆರಂಭಿಸಿ. ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ. ಜನರ ಜೀವನ ಸರಳವಾಗಬೇಕು. ಅವರಿಗೆ ಸರಿಯಾದ ಮನೆ, ಗ್ಯಾಸ್ ವ್ಯವಸ್ಥೆ, ವಿದ್ಯುತ್ತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆ ಬಗ್ಗೆ ಹೇಳಿದರು.2014 ರಲ್ಲಿ ಸ್ವಚ್ಚ ಭಾರತದ ವಿನಂತಿ ಮಾಡಿಕೊಂಡಿದ್ದೆ. ಗಾಂಧೀಜೀಯ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಯಲುಮುಕ್ತ ಶೌಚಾಲಯದ ಸಂಕಲ್ಪ ಮಾಡೋಣ.

ನಾನು ಈ ಪವಿತ್ರ ಭೂಮಿಯಲ್ಲಿ ಮೂರು ಸಂಕಲ್ಪ ನಿಮ್ಮ ಮುಂದೆ ಇಡುತ್ತೇನೆ. ಮೊದಲನೇ ಸಂಕಲ್ಪ ಸಂಸ್ಕೃತಿ ಅಂದರೆ ಕರ್ತವ್ಯಕ್ಕೆ ಮಹತ್ವ ನೀಡುವ ಸಂಸ್ಕೃತಿಯನ್ನ ಜಾಗೃಥ ಮಾಡಬೇಕು. ಎರಡನೇ ಸಂಕಲ್ಪ ಪ್ರಕೃತಿ, ಅದನ್ನ ಕಾಪಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾಗಬೇಕು ಎಂದರು. ಮೂರನೇ ಸಂಕಲ್ಪ ನೀರು ಉಳಿಸೋಣ ಪಣ ತೊಡೋಣ.

ಪಾಕ್ ವಿರುದ್ಧ ನಾವು ಧ್ವನಿ ಎತ್ತುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತೇವೆ. ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ನೀವು ಧ್ವನಿ ಎತ್ತಿ. ಪ್ರತಿಭಟನೆ ಪಾಕಿಸ್ತಾನ ವಿರುದ್ಧ ಮಾಡಿ. ಉಗ್ರವಾದದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ. ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿಯ ಯುಗ ಆರಂಭವಾಗಿದೆ. ವಿದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಿದ್ದೇವೆ. ಧರ್ಮದ ಆಧಾರದಲ್ಲಿ ಪಾಕಿಸ್ತಾನದ ಜನ್ಮ ತಾಳಿದೆ. ಇದೇ ಕಾರಣಕ್ಕೆ ಅನ್ಯರ ವಿರುದ್ಧ ದೌರ್ಜನ್ಯ ಮಾಡುತ್ತಿದೆ.

ಇನ್ನು ಕೃಷಿ ಕರ್ಮಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅತ್ಯುತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ನೀಡಿದರು. ಜತೆಗೆ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಡಿದ ಪ್ರಧಾನಿ, ರೈತರಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುಜದು. ಇದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಬೆಳೆಯುವ ಗುಲಾಬಿ, ಕಾಫಿ, ದಾಳಿಂಬೆ, ಈರುಳ್ಳಿ, ಒಣ ಮೆಣಸಿನಕಾಯಿಯ ಕ್ಲಸ್ಟರ್ ನಿರ್ಮಾಣದ ಯೋಜನೆ ಹೊಂದಿದ್ದೇವೆ. ಭಾರತ ಮಸಾಲ ಉತ್ಪಾದನೆ ಹಾಗೂ ರಫ್ತಿನ ಪ್ರಮಾಣ ಹೆಚ್ಚಾಗಿದೆ. ಇದರ ರಫ್ತು 15 ಸಾವಿರ ಕೋಟಿಯಿಂದ 19 ಸಾವಿರ ಕೋಟಿಯಷ್ಟು ಏರಿಕೆಯಾಗಿದೆ ಎಂದರು.

Leave a Reply