216 ಅಡಿ ಎತ್ತರದ ಕಟೌಟ್, 5 ಸಾವಿರ ಕೆ.ಜಿ ಕೇಕ್! ಇದು ಯಶ್ ಹುಟ್ಟು ಹಬ್ಬದ ತಯಾರಿ!

ಡಿಜಿಟಲ್ ಕನ್ನಡ ಟೀಮ್:

ಕೆಜಿಎಫ್ ಚಿತ್ರದ ನಂತರ ದೇಶಾದ್ಯಂತ ತಮ್ಮ ಅಭಿಮಾನಿ ಬಳಗ ವಿಸ್ತರಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ಬೆಂಗಳೂರಿನ ನಾಯಂಡನಹಳ್ಳಿ ಬಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ ಯಶ್ ಅಭಿಮಾನಿಗಳ ಸಂಘ ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಿದ್ದು, ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ರಾಜ್ಯದಿಂದ ಮಾತ್ರವಲ್ಲ ನೆರೆಯ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಅಭಿಮಾನಿಗಳು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕಾಗಿ 216 ಅಡಿಯ ಯಶ್ ಕಟೌಟ್, 5 ಸಾವಿರ ಕೆಜಿ ತೂಕದ ಕೇಕ್ ಸಿದ್ಧವಾಗಲಿದೆ.

ಪ್ರತಿ ವರ್ಷ ತಮ್ಮ ಮನೆಯ ಬಳಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ಯಶ್, ಕಳೆದ ವರ್ಷ ಹಿರಿಯ ನಟ ಅಂಬರೀಶ್ ನಿಧನದಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಯಶ್ ಅವರಿಗೆ ಅಚ್ಚರಿಯ ಉಡುಗೊರೆಯಾಗಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಯಶ್ ಈ ಹುಟ್ಟುಹಬ್ಬಕ್ಕೆ ಒಪ್ಪಿದ್ದಾರೆ.

Leave a Reply