ನಾನಕಾನ ಸಾಹಿಬ್ ಗುರುದ್ವಾರದ ಮೇಲಿನ ದಾಳಿ! ಸಿಎಎ ಪರ ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹೀಗಾಗಿ ಅವರಿಗೆ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ ಎಂದು ಬಿಜೆಪಿ  ವಾದಿಸುತ್ತಿರುವಾಗಲೇ ಪಾಕಿಸ್ತಾನದ ನಾನಕಾನ ಸಾಹೀಬ್ ಗುರುದ್ವಾರದಲ್ಲಿ  ದಾಳಿ ನಡೆದಿದೆ. ಇದು ಸಹಜವಾಗಿ ಸಿಎಎ ಸಮರ್ಥನೆ ಮಾಡಿಕೊಳ್ಳಲು ಹೊಸ ಅಸ್ತ್ರ ಸಿಕ್ಕಂತಾಗಿದೆ.

ಪಾಕಿಸ್ತಾನದಲ್ಲಿನ ದಾಳಿಯನ್ನು ಭಾರತ ಖಂಡಿಸಿದ್ದು, ಪಾಕಿಸ್ತಾನದಲ್ಲಿ ಸಿಖ್ಖರಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದೆ. ವಿದೇಶಾಂಗ ಸಚಿವಾಲಯ ಹೇಳಿಕೆ ಪ್ರಕಟಿಸಿದ್ದು, ‘ಪಾಕಿಸ್ತಾನದಲ್ಲಿರುವ ನಾನಕಾನ ಸಾಹೀಬ್ ನ ಪವಿತ್ರ ಕ್ಷೇತ್ರದಲ್ಲಿ ಸಿಖ್ಖರನ್ನು ಗುರಿಯಾಗಿಸಿ ದಾಳಿ ನಡೆದಿದೆ. ಈ ದಾಳಿ ನಡೆಸಿದವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ಆಗ್ರಹಿಸಿದೆ.

ನಾಳೆಯಿಂದ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿನ ಈ ದಾಳಿಯನ್ನು ಪ್ರಚಾರದ ಅಸ್ತ್ರವಾಗಿ ಪ್ರಯೋಗಿಸುವ ಸಾಧ್ಯತೆ ಹೆಚ್ಚಾಗಿದೆ.

Leave a Reply