ಭಾರತದ ವಿರುದ್ಧ ಮತ್ತೆ ಬುರುಡೆ ಬಿಟ್ಟ ಪಾಕ್! ಇಮ್ರಾನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ತರಲು ಪಾಕಿಸ್ತಾನ ಮತ್ತೊಮ್ಮೆ ಬುರುಡೆ ಬಿಟ್ಟಿದೆ. ಪಾಕಿಸ್ತಾನದ ಆರೋಪ ಸುಳ್ಳು ಎಂದು ಭಾರತ ಸಾಕ್ಷಿ ಸಮೇತ ಬಹಿರಂಗ ಮಾಡಿದ ಮೇಲೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೊಲೀಸರು ಮುಸ್ಲಿಂ ಯುವತಿ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಇಮ್ರಾನ್ ಖಾನ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿದ್ದರು. ಆದರೆ ಈ ವಿಡಿಯೋ ಭಾರತದಲ್ಲಿನ ಘಟನೆಯಲ್ಲ ಅದು ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ವಿಡಿಯೋ ಎಂದು ಭಾರತ ಸಾಕ್ಷಿ ಸಮೇತ ಸಾಬೀತು ಪಡಿಸಿತು.

ಇಮ್ರಾನ್ ಖಾನ್ ಆರೋಪಕ್ಕೆ ತಿರುಗೇಟು ನೀಡಿದ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಅಕ್ಬರುದ್ದೀನ್, ‘ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಕಟಿಸಿರುವ ವಿಡಿಯೋ ಏಳು ವರ್ಷಗಳ ಹಳೆಯದ್ದು. ಅಲ್ಲದೆ ಇದು ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಹಿಂಸಾಚಾರ ಘಟನೆಯ ವಿಡಿಯೋ ಎಂದು ತಿಳಿಸಿದರು.

Leave a Reply