ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್2 ಟೀಸರ್ ಬರುತ್ತಾ? ಪೋಸ್ಟರ್ ಬರುತ್ತಾ? ಇಲ್ಲಿದೆ ಅಧಿಕೃತ ಮಾಹಿತಿ!

ಡಿಜಿಟಲ್ ಕನ್ನಡ ಟೀಮ್:

ಜನವರಿ 8ರಂದು ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಭರ್ಜರಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೆಜಿಎಫ್2 ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಕಾತುರದಿಂದಲೂ ಕಾಯುತ್ತಿದ್ದಾರೆ.

ಆದರೆ,

ಯಶ್ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿಸಿದೆ. ಆದ್ರೆ ಟೀಸರ್ ಬದಲಿಗೆ ಚಿತ್ರದ ಎರಡನೇ ಲುಕ್ ಅನ್ನು ಜ.8ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, ಅದು ಹೀಗಿದೆ…

ಚಿತ್ರದ ಚಿತ್ರೀಕರಣ ಜನವರಿ 6ರ ವರೆಗೆ ನಡೆಯುತ್ತಿದ್ದು, ಚಿತ್ರ ತಂಡ ಜನವರಿ 7ರಂದು ಬೆಂಗಳೂರಿಗೆ ಮರಳುತ್ತಿದೆ. ಹೀಗಾಗಿ ಟೀಸರ್ ಬಿಡುಗಡೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ನಿಮಗೆ ನಿರಾಸೆ ಮೂಡಿಸುತ್ತಿರುವುದಕ್ಕೆ ಬೇಸರವಾಗುತ್ತಿದೆ ಕ್ಷಮಿಸಿ. ನಿಮ್ಮ ಪ್ರೀತಿ ಹೀಗೆ ಇರಲಿ.

ಚಿತ್ರದ ಮೇಲೆ ನೀವೆಲ್ಲ ಅಪಾರವಾದ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದೀರಿ. ಹೀಗಾಗಿ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಟೀಸರ್ ಬಿಡುಗಡೆ ಮಾಡದಿರುವುದಕ್ಕೆ ಸಂಪೂರ್ಣ ಜವಾಬ್ದಾರಿ ನಾನೇ ಹೊತ್ತು ಕ್ಷಮೆ ಕೇಳುತ್ತೇನೆ. ನಮ್ಮ ಬೆನ್ನಿಗೆ ನಿಂತಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು.’

Leave a Reply