ಯಡಿಯೂರಪ್ಪ ಬೇಡಿಕೆಗೆ ಸ್ಪಂದಿಸಿ 1869 ಕೋಟಿ ಕೊಟ್ಟ ಮೋದಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಭೀಕರ ಪರಿಹಾರಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎಂಬ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ರಾಜ್ಯಕ್ಕೆ ಹೆಚ್ಚುವರಿ 1869.85 ಕೋಟಿ ಹಣ ಬಿಡುಗಡೆ ಮಾಡಿದೆ.

ಇಂದು ದೆಹಲಿಯಲ್ಲಿ ನಡೆದ ಗೃಹ ಸಚಿವಾಲಯ ಉನ್ನತ ಸಮಿತಿ ಸಭೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಏಳು ರಾಜ್ಯಗಳಿಗೆ ಎನ್ ಡಿಆರ್ ಎಫ್ ನಿಧಿಯಿಂದ 5908.56 ಕೋಟಿ ಬಿಡುಗಡೆ ಮಾಡಿದೆ.

ಇದರಲ್ಲಿ ಕರ್ನಾಟಕಕ್ಕೆ 1869.85 ಕೋಟಿ, ಅಸ್ಸಾಂಗೆ 616.63 ಕೋಟಿ, ಹಿಮಾಚಲ ಪ್ರದೇಶಕ್ಕೆ 285.93 ಕೋಟಿ, ಮಧ್ಯಪ್ರದೇಶಕ್ಕೆ 1749.73 ಕೋಟಿ, ಮಹಾರಾಷ್ಟ್ರಕ್ಕೆ 956.93 ಕೋಟಿ, ತ್ರಿಪುರಾಕ್ಕೆ 63.32 ಕೋಟಿ ಮತ್ತು ಉತ್ತರ ಪ್ರದೇಶಕ್ಕೆ 367.17 ಕೋಟಿ ಬಿಡುಗಡೆ ಮಾಡಿದೆ.

Leave a Reply